ಶಿರಸಿ: ನಿನ್ನೆ ತಡರಾತ್ರಿ ನಗರದ ಟಿಎಸ್ಎಸ್ ರಸ್ತೆಯ ಶುಭದ ಫಾರ್ಮಾ ಬಳಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಗಲಾಟೆಗೆ ಸಂಬಂಧಿಸಿದಂತೆ ಪರಸ್ಪರ ದೂರು ದಾಖಲಾಗಿದ್ದು ಬನವಾಸಿ ರಸ್ತೆ ಗಾಯತ್ರಿ ನಗರದ ಗುತ್ತಿಗೆದಾರ ರಮೇಶ ದುಬಾಶಿ ತನಗೆ ಬೈದು, ಕಪಾಳಕ್ಕೆ ಹೊಡೆದಿದ್ದಾರೆಂದು ಆರೋಪಿಸಿ ಯಶವಂತ ಬೈಂದೂರ, ಕಾಶಿನಾಥ ಬೈಂದೂರ, ಮಂಜುನಾಥ ಬೈಂದೂರ,ನಾಗೇಂದ್ರ ಬಿ ಬೈಂದೂರ ಹಾಗೂ ಇತರರು ವಿರುದ್ಧ ದೂರು ನೀಡಿದ್ದಾರೆ.ಹಾಗೆಯೇ ವಿರಾಜ ಪ್ರಭಾಕರ ಶೆಟ್ಟಿ ನೆಜ್ಜೂರ್ ಕಾಲೋನಿ, ಬನವಾಸಿ ರಸ್ತೆ ಶಿರಸಿ ಈತ ನಿನ್ನೆ ರಾತ್ರಿ 11:30 ರ ವೇಳೆಯಲ್ಲಿ ಟಿ.ಎಸ್.ಎಸ್ ರಸ್ತೆಯ ಸುವರ್ಣ ಕೋ ಆಪರೇಟಿವ್ ಬ್ಯಾಂಕ್ ಬಳಿ ಸ್ನೇಹಿತ ಯಶವಂತ ಬೈಂದೂರ ಎಂಬಾತನಿಗೆ ರಮೇಶ ದುಬಾಶಿ,ಭರತ ದುಬಾಶಿ,ಪಯ್ಯು ಚೌಟಿ ಸೇರಿ ಹೊಡೆಯುತ್ತಿರುವಾಗ ತಪ್ಪಿಸಲು ಹೋದ ತನಗೆ ಈ ಮೂವರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಈ ಬೀದಿ ಗಲಾಟೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಶಿರಸಿಯಲ್ಲಿ ಮಿತಿಮೀರುತ್ತಿರುವ ರೌಡಿಸಂಗೆ ತಡೆ ಹಾಕುವಲ್ಲಿ ಶಿರಸಿ ಪೊಲೀಸ್ ಇಲಾಖೆ ಹಾಗೂ ಎಸ್ ಪಿ ದೀಪನ್ ರವರು ತಕ್ಷಣ, ತೀವ್ರ ಕಾರ್ಯಾಚರಿಸಬೇಕಾಗಿದೆ. ಇಲ್ಲಿ ಏನು ಮಾಡಿದರು ನಡೆಯುತ್ತೆ ಎಂಬ ಮದದಿಂದ ಮೆರೆಯುತ್ತಿರುವವರಿಗೆ ಕಂಬಿ ಹಿಂದಿನ ಜಾಗ ತೋರಿಸಬೇಕಾಗಿದೆ.




