ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಯುವಕನೋರ್ವ ಮನೆಯ ಎದುರು ಮಾಡಿನ ಪಕ್ಕಾಸಿಗೆ ರೋಪ್ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ದಿನೇಶ್ ಎಂದು ತಿಳಿದು ಬಂದಿದೆ.
ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರ ಹರೀಶ್ ಅಮೀನ್ ಪ್ರಾಯ: 40ವರ್ಷ ತಂದೆ: ದಿ.ರಾಜು ಅಮೀನ್ ವಾಸ: ವಾದಿರಾಜ ಆಚಾರ್ಯ ರವರ ಬಾಡಿಗೆ ಮನೆ,ಮಹಾಲಿಂಗೇಶ್ವರ ದೇವಸ್ಥಾನದ ಬಳಿ,ಗರಡಿಮಜಲು ತೆಂಕನಿಡಿಯೂರು ಇವರ ತಮ್ಮ ದಿನೇಶ್ ಪ್ರಾಯ: 37 ವರ್ಷ ರವರು ಗರಡಿಮಜಲಿನಲ್ಲಿರುವ ಅಮ್ಮ ಹೋಟೇಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಈಗ 2 ತಿಂಗಳುಗಳಿಂದ ಕೆಲಸ ಇಲ್ಲದೆ ಮನೆಯಲ್ಲಿ ಇರುತ್ತಿದ್ದನು. ಪಿರ್ಯಾದಿದಾರರ ತಮ್ಮ ತನ್ನ ಖರ್ಚಿಗಾಗಿ ಸ್ವಲ್ಪ ಕೈಸಾಲ ಮಾಡಿದ್ದನು. ಸರಿಯಾದ ಕೆಲಸ ಇಲ್ಲದೆ ಇದ್ದುದರಿಂದ, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 01-12-2025 ರಂದು 20:30 ಗಂಟೆಯಿಂದ ದಿನಾಂಕ 02-12-2025 ರಂದು ಬೆಳಿಗ್ಗೆ 10:30 ಗಂಟೆಯ ಮದ್ಯಾವಧಿಯಲ್ಲಿ ಕೊಡವೂರು ಗ್ರಾಮದ ಮೂಡಬೆಟ್ಟು ಸರಕಾರಿ ಶಾಲೆ ಬಳಿ ಇರುವ ನಮ್ಮ ಮನೆಯ ಎದುರು ಮಾಡಿನ ಪಕ್ಕಾಸಿಗೆ ರೋಪ್ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ನಂಬ್ರ:92/2025 ಕಲಂ:194 BNSS ರಂತೆ ಪ್ರಕರಣ ದಾಖಲಿಸಲಾಗಿದೆ.



