ಉಡುಪಿ : ಪ್ರಸಕ್ತ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯ ಸಮನ್ವಯ ಶಿಕ್ಷಣ, ಮಧ್ಯವರ್ತನ ಚಟುವಟಿಕೆ ತಾತ್ಕಾಲಿಕವಾಗಿ ವಿಶೇಷ ಶಿಕ್ಷಕರ ಸೇವೆ ಪಡೆಯಲು ಅನುಷ್ಠಾನಗೊಳಿಸಲು ಪ್ರಾಥಮಿಕ/ಪೌಢಶಾಲಾ ಹಂತದ ಖಾಲಿ ಇರುವ ಬಿಐಇಆರ್‌ಟಿ ಹುದ್ದೆಗಳನ್ನು ನೇರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ನಿಗದಿತ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಜೂ.23 ಕೊನೆಯ ದಿನ. ಮಾಹಿತಿಗೆ ಉಪಯೋಜನಾ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಕಚೇರಿಯನ್ನು ಸಂಪರ್ಕಿಸಲು ಸಮನ್ವಯಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಕಚೇರಿ ಪ್ರಕಟನೆ ತಿಳಿಸಿದೆ.




