ಬೈಂದೂರು : ಖಂಬಳಗದ್ದೆ ರಸ್ತೆ ನೆಲ್ಯಾಡಿ ತಗ್ಗರ್ಸೆ ನಿವಾಸಿ ಗಣಪತಿ ಪೂಜಾರಿ (51) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತರ ಪತ್ನಿ ನಾಗರತ್ನ (41) ನೀಡಿದ ದೂರಿನ ಪ್ರಕಾರ, ಗಣಪತಿ ಪೂಜಾರಿ ಅವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಮದ್ಯಪಾನ ಮಾಡಿಕೊಂಡು ಬಂದು ಮನೆಯಲ್ಲಿ ಗಲಾಟೆ ನಡೆಸುವುದು ಹಾಗೂ ಪತ್ನಿ ಮತ್ತು ಮಕ್ಕಳಿಗೆ ಹಲ್ಲೆ ಮಾಡುವುದನ್ನು ರೂಢಿಸಿಕೊಂಡಿದ್ದರು ಎನ್ನಲಾಗಿದೆ.
ದಿನಾಂಕ 29/05/2026ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅವರು ಮದ್ಯವನ್ನು ತಂದು ರಾತ್ರಿ ಸೇವಿಸಿದ್ದು, ಬಳಿಕ ಗಲಾಟೆ ನಡೆಸಿದ್ದಾರೆ. ನಂತರ ಕುಟುಂಬದವರು ಊಟ ಮಾಡಿ ರಾತ್ರಿ ಸುಮಾರು 10:15 ಗಂಟೆಗೆ ಮಲಗಿದ್ದರು.
ರಾತ್ರಿ ಸುಮಾರು 12:30 ಗಂಟೆಗೆ ನಾಗರತ್ನ ಅವರು ನೀರು ಕುಡಿಯಲು ಎದ್ದಾಗ ಮನೆಯ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಹೊರಗೆ ಬಂದು ನೋಡಿದಾಗ ಗಣಪತಿ ಪೂಜಾರಿ ಅವರು ಮನೆಯ ಸಿಟ್‌ಔಟ್‌ನಲ್ಲಿದ್ದ ಸೀಲಿಂಗ್ ಹುಕ್‌ಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಈ ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




