Home Latest ರೆಸಾರ್ಟ್‌ನಲ್ಲಿ ಮಲಗಿದ್ದ ಪ್ರವಾಸಿ ಮಹಿಳೆ ಸಾವು…!!

ರೆಸಾರ್ಟ್‌ನಲ್ಲಿ ಮಲಗಿದ್ದ ಪ್ರವಾಸಿ ಮಹಿಳೆ ಸಾವು…!!

ಮಲ್ಪೆ : ರೆಸಾರ್ಟ್‌ನಲ್ಲಿ ತಂಗಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಲ್ಪೆ ಪಡುಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಬೆಂಗಳೂರಿನ ಎಲ್.ಜಾಕ್ಸನ್ ಎಂಬವರ ಪತ್ನಿ ಲೆನ್ಸಿ ಮೇರಿ ಯಾನೆ ಸೂರ್ಯ(36) ಎಂದು ಗುರುತಿಸಲಾಗಿದೆ.

ಇವರು ಫೆ.26ರಂದು ಇತರ 9 ಮಂದಿಯೊಂದಿಗೆ ಬೆಂಗಳೂರಿನಿಂದ ಹೊರಟು ಪಡುಕೆರೆಯ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು.

ಫೆ.27ರಂದು ಮಲ್ಪೆ ಬೀಚ್‌ನಲ್ಲಿ ಸುತ್ತಾಡಿ ಬಂದು ರಾತ್ರಿ ಮಲಗಿದ್ದರು. ಫೆ.28ರಂದು ಬೆಳಗ್ಗೆ 8.30ಕ್ಕೆ ಲೆನ್ಸಿ ಮೇರಿಯನ್ನು ಎಬ್ಬಿಸಿದಾಗ ಏಳದೆ ಇದ್ದು, ಕೂಡಲೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು.

ಲೆನ್ಸಿ ಮೇರಿ ಹೃದಯಾಘಾತದಿಂದಲೋ ಅಥವಾ ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.