Home Karavali Karnataka ಟೆನ್ನಿಸ್ ಬಾಲ್ ಕ್ರಿಕೆಟ್ ದಿಗ್ಗಜ ಅಲ್ ರೌಂಡರ್ ವಿನ್ಸಿ ಪಡುಬಿದ್ರೆ ನಿಧನ….!!

ಟೆನ್ನಿಸ್ ಬಾಲ್ ಕ್ರಿಕೆಟ್ ದಿಗ್ಗಜ ಅಲ್ ರೌಂಡರ್ ವಿನ್ಸಿ ಪಡುಬಿದ್ರೆ ನಿಧನ….!!

ಉಡುಪಿ: ಕರಾವಳಿಯ ಖ್ಯಾತ ಕ್ರಿಕೆಟಿಗ, ಪ್ರತಿಷ್ಠಿತ ರಾಜ್ಯಮಟ್ಟದ ಮತ್ತು ರಾಷ್ಟ್ರಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಕೂಟಗಳಲ್ಲಿ ತನ್ನ ಆಲ್ ರೌಂಡರ್ ಆಟದ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದ ವಿನ್ಸಿ ಪಡುಬಿದ್ರೆ ನಾಮಾಂಕಿತ ವಿನ್ಸೆಂಟ್ ಫೆರ್ನಾಂಡಿಸ್ ಇಂದು ಮುಂಜಾನೆ ನಿಧನರಾಗಿದ್ದಾರೆ.

ಅವಿಭಾಜ್ಯತ ಜಿಲ್ಲೆಯ ಮತ್ತು ರಾಜ್ಯದ ಪ್ರತಿಷ್ಠಿತ ಪಡುಬಿದ್ರೆ ಫ್ರೆಂಡ್ಸ್ ಇದರ ಪ್ರಮುಖ ಆಟಗಾರರಾಗಿದ್ದ ವಿನ್ಸಿ ತನ್ನ 45ರ ಹರೆಯದಲ್ಲೂ ಬ್ಯಾಟಿನಲ್ಲಿ ಮಿಂಚು ಹರಿಸುತ್ತಿದ್ದರು. ಮೈದಾನದಲ್ಲಿ ಅತ್ಯಂತ ಶ್ರೇಷ್ಠ ಆಟಗಾರರಾಗಿದ್ದ ಇವರು ಕಳೆದ ಹಲವಾರು ವರ್ಷಗಳಿಂದ ಪಡುಬಿದ್ರೆಯಲ್ಲಿ ಕ್ರೀಡಾ ಮಳಿಗೆಯನ್ನು ಆರಂಭಿಸಿದ್ದರು.

ರಾಜ್ಯದ ಮೂಲೆ ಮೂಲೆಗಳಲ್ಲಿ ಆಡಿದ ಅನುಭವವಿರುವ ಇವರು, ಯಾವುದೇ ರೀತಿಯ ಕ್ರಿಕೆಟಿಗೂ ಹೊಂದಿಕೊಳ್ಳುವಂತಹ ಆಟಗಾರ. ಪಾದರಸದಂತೆ ಮಿಂಚಿನ ಸಂಚಲನ ಉಂಟುಮಾಡುವ ಇವರ ಸಿಕ್ಸರ್ ಗಳನ್ನು ನೋಡುವುದೇ ಒಂದು ಚೆಂದ. ತನ್ನ ಸ್ವಿಂಗ್ ಬೌಲಿಂಗ್ ಶೈಲಿಯ ಮೂಲಕ‌ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದರು. ಹಿರಿಯ ಆಟಗಾರನಾದರೂ ಯುವ ಆಟಗಾರರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ಅವರು ತಾಯಿ, ಪತ್ನಿ, ಪುತ್ರಿ ಮತ್ತು ಅಪಾರ ಕ್ರೀಡಾಭಿಮಾನಿಗಳನ್ನು ಅಗಲಿದ್ದಾರೆ.