ಬಂಟ್ವಾಳ : ಗುಡ್ಡದಲ್ಲಿ ಮರ ಹತ್ತಿ ಸೊಪ್ಪು ಕಡಿಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.
ಮೊಡಂಕಾಪು ಗ್ರಾಮದ ರಾಜೀವ ಪಲಿಕೆ ಎಂಬಲ್ಲಿ ಮಂಗಳವಾರ ಸಂಜೆ ಪ್ರಕರಣ ನಡೆದಿದೆ.
ಕೃಷ್ಣಪ್ಪ ಕುಲಾಲ್ (82) ಮೃತ ವ್ಯಕ್ತಿ. ಅವರು ಮನೆಯ ಸಮೀಪವೇ ಶಂಭೂರು ಎ.ಎಂ.ಆರ್. ಸ್ಥಾವರದಿಂದ ವಿದ್ಯುತ್ ಪೂರೈಕೆಯಾಗುವ 110 ಕೆ.ವಿ. ಹೈಟೆನ್ನನ್ ವಿದ್ಯುತ್ ಮಾರ್ಗವಿದೆ. ಈ ಲೈನ್ ನ ಕೆಳಭಾಗದಲ್ಲಿ ಅವರು ಸೊಪ್ಪು ಕಡಿಯುತ್ತಿದ್ದಾಗ ವಿದ್ಯುತ್ ಸ್ಪರ್ಶಗೊಂಡು ತೀವ್ರ ಆಘಾತಕ್ಕೊಳಗಾಗಿದ್ದರು.
ವಿಷಯ ತಿಳಿದು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ.




