Home Crime ಬೆಂಗಳೂರು : ಬರೋಬ್ಬರಿ 7.80 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ : ಇಬ್ಬರ ಬಂಧನ….!!

ಬೆಂಗಳೂರು : ಬರೋಬ್ಬರಿ 7.80 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ : ಇಬ್ಬರ ಬಂಧನ….!!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಬರೋಬ್ಬರಿ 7.80 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ಸಂಬಂಧ ನೈಜೀರಿಯಾ ಮೂಲದ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನ ಕೆವಿನ್ ರೋಜರ್, ಥಾಮಸ್ ನವೀದ್ ಚೀಮ್ ಎಂದು ಗುರುತಿಸಲಾಗಿದೆ.

ದೆಹಲಿ ಮತ್ತು ಮುಂಬಯಿಂದ ಆರೋಪಿಗಳು ಡ್ರಗ್ಸ್​ ತರಿಸಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಸಿಸಿಬಿ ಹಾಗೂ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಬಂಧಿತರಿಂದ 3.8 ಕೆಜಿ ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಬ್ರೌನ್ ಹಾಗೂ ವೈಟ್ ಡ್ರಗ್ಸ್, 42 ಗ್ರಾಂ ತೂಕದ 82 ಎಕ್ಸಟೆಸಿ ಮಾತ್ರೆಗಳು, 23 ಕೆ.ಜಿ. ಗಾಂಜಾ ಹಾಗೂ 482 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಹೆಬ್ಬಗೋಡಿಯಲ್ಲಿ ಮನೆ ಮಾಡಿದ್ದ ಆರೋಪಿಗಳು, ಪರಿಚಿತ ಸ್ಥಳಗಳಲ್ಲಿ ಡ್ರಗ್ಸ್ ಪಾರ್ಸೆಲ್ ಇಟ್ಟು ಲೊಕೇಶನ್​ ಶೇರ್​ ಮಾಡಿ ವ್ಯವಹಾರ ನಡೆಸುತ್ತಿದ್ದರು. ಡ್ರಗ್ಸ್​ ಹಣವನ್ನ ಆನ್​ ಲೈನ್​ ಮೂಲಕ ಸ್ವೀಕರಿಸುತ್ತಿದ್ದರು. ಟೆಕ್ಕಿಗಳು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್​ ಆಗಿತ್ತು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.