ಮಂಗಳೂರು: ಗಾಂಧಿ ನಗರದ ಎಂಟನೆಯ ಅಡ್ಡ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಸುರೇಖ ಪೈ ಅವರ ಒಡೆತನದ ನಾರಾಯಣ ಅಪಾರ್ಟ್ಮೆಂಟ್‌ನಲ್ಲಿ ಅನಾಹುತ ಸಂಭವಿಸಿದ್ದು, ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಅಗ್ನಿಶಾಮಕ ದಳವು ಒಂದು ಗಂಟೆಗೂ ಹೆಚ್ಚು ಸಮಯದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.






