ಲಕ್ಸುರಿ ಥಾರ್ ಗಾಡಿಲಿ ಬಂದು ಡೆಲಿವರಿ ನೀಡಿದ ಬ್ಲಿಂಕಿಟ್ ಡೆಲಿವರಿ ಬಾಯ್.…
ದೆಹಲಿ : ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರು ಐಷಾರಾಮಿ ಮಹೀಂದ್ರಾ ಥಾರ್ ಗಾಡಿಯಲ್ಲಿ ಬಂದು ಗ್ರಾಹಕರಿಗೆ ಆರ್ಡರ್ ತಲುಪಿಸಿ ಅಚ್ಚರಿ ಮೂಡಿಸಿದ್ದಾರೆ.
ಈ ಅನಿರೀಕ್ಷಿತ ಘಟನೆಯನ್ನು ಗ್ರಾಹಕರು ವೀಡಿಯೋ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ.
ಸಾಮಾನ್ಯವಾಗಿ ಡೆಲಿವರಿ ಬಾಯ್‌ಗಳೆಂದರೆ ಜೀವನಕ್ಕಾಗಿ ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ಮಧ್ಯಮ ವರ್ಗದ ಜನರು ಎಂಬುದು ಬಹುತೇಕರ ಊಹೆ ಇದರ ಹೊರತಾಗಿ ಮಹಾನಗರಗಳಲ್ಲಿ ಬಹುತೇಕ ಡೆಲಿವರಿ ಏಜೆಂಟ್‌ಗಳಾಗಿ ಕೆಲಸ ಮಾಡುವ ಹುಡುಗರು ಇದರಲ್ಲಿ ಪಾರ್ಟ್‌ಟೈಮ್ ಉದ್ಯೋಗಿಗಳಾಗಿ ಕೆಲಸ ಮಾಡುತ್ತಾರೆ. ಇದರಲ್ಲಿ ಕಾಲೇಜುಗಳಲ್ಲಿ ಓದುತ್ತಿರುವ ಹುಡುಗರು ಬೇರೆ ಬೇರೆ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿ ಕೆಲಸ ಮಾಡುವವರು ಕೂಡ ಈ ಆನ್‌ಲೈನ್ ಡೆಲಿವರಿ ಸಂಸ್ಥೆಗಳಲ್ಲಿ ಡೆಲಿವರಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುತ್ತಾರೆ.
ಇಂತಹವರು ಬಹುತೇಕ ಬೈಕ್ ಸ್ಕೂಟರ್, ಸ್ಕೂಟಿಗಳಲ್ಲಿ ತಮ್ಮ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಡೆಲಿವರಿ ಏಜೆಂಟ್ ಒಬ್ಬರು ಥಾರ್ ಗಾಡಿಯಲ್ಲಿ ಬಂದು ಡೆಲಿವರಿ ನೀಡಿದ್ದು, ಇದು ಆರ್ಡರ್ ಮಾಡಿದ ಗ್ರಾಹಕರನ್ನು ಅಚ್ಚರಿಗೀಡು ಮಾಡಿದೆ.
divyagroovezz ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ದಿವ್ಯಾ ಶ್ರೀವಾಸ್ತವ್ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಪ್ಪು ಬಣ್ಣದ ಮಹೀಂದ್ರಾ ಥಾರ್ ಗಾಡಿ ಮೋಟಾರ್ ವೆಹಿಕಲ್ ಪ್ರಿಯರಿಗೆ ಬೇರೆಯದ್ದೇ ಒಂದು ವೈಬ್ ನೀಡಿರುವಂತಹ ಗಾಡಿ, ಬಹುತೇಕ ಐಷಾರಾಮಿ ಜೀವನ ಇಷ್ಟಪಡುವವರು ಇದನ್ನು ಖರೀದಿಸುತ್ತಾರೆ. ದುಡ್ಡಿದ್ದವರು ಖರೀದಿಸಿ ಎಂಜಾಯ್ ಮಾಡ್ತಾರೆ. ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರು ಈ ಥಾರ್ ಗಾಡಿಯಲ್ಲಿ ಬಂದು ಗ್ರಾಹಕನರಿಗೆ ಅಚ್ಚರಿ ಮೂಡಿಸಿದ್ದಾರೆ.
ಇಂತಹ ಲಕ್ಸುರಿ ವಾಹನದಲ್ಲಿ ಬಂದು ಗ್ರಾಹಕರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವರಿ ನೀಡಿದ್ದು, ಇದನ್ನು ನೋಡಿ ಆರ್ಡರ್ ಮಾಡಿದ್ದ ಯುವತಿ ಅಚ್ಚರಿಗೊಂಡು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.