Home Crime ಬ್ರಹ್ಮಾವರ: ಬಾವಿಗೆ ಹಾರಿ  ಮಹಿಳೆ ಆತ್ಮಹತ್ಯೆ..!!

ಬ್ರಹ್ಮಾವರ: ಬಾವಿಗೆ ಹಾರಿ  ಮಹಿಳೆ ಆತ್ಮಹತ್ಯೆ..!!

ಬ್ರಹ್ಮಾವರ: ತಾಲೂಕಿನ ಕಾಡೂರು ಗ್ರಾಮದ ತಂತ್ರಾಡಿ ಸಮೃದ್ಧಿ ನಿಲಯದಲ್ಲಿ ವಾಸಿಸುತ್ತಿದ್ದ ವೃದ್ಧ ಮಹಿಳೆಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಗೋಪಾಲಕೃಷ್ಣ ಭಟ್‌  ಅವರ ಪತ್ನಿ ರುಕ್ಮಿಣಿ ಜಿ.ಕೆ ಭಟ್‌ (80) ಅವರು ಕಳೆದ ಆರು ವರ್ಷಗಳಿಂದ ಸೋಡಿಯಂ ಕೊರತೆಯಿಂದ ಬಳಲುತ್ತಿದ್ದು, ಇದರಿಂದಾಗಿ ಆಗಾಗ ತಲೆ ತಿರುಗಿ ಬೀಳುವ ಸಮಸ್ಯೆಯಿಂದ ನರಳುತ್ತಿದ್ದರು.

ಈ ಆರೋಗ್ಯ ಸಮಸ್ಯೆಯಿಂದ ಮನನೊಂದು, ದಿನಾಂಕ 07.04.2026 ರಂದು ರಾತ್ರಿ ಸುಮಾರು 8.00 ಗಂಟೆಯಿಂದ 8.40 ಗಂಟೆಯ ಮಧ್ಯೆ ಮನೆಯ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.