ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ವ್ಯಕ್ತಿಯೊಬ್ಬರಿಗೆ ಮೊಬೈಲ್ ನಲ್ಲಿ ಸಂದೇಶವೊಂದು ಬಂದು ಟಾಸ್ಕ್ ನೀಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ಬ್ರಹ್ಮಾವರದ ನಿವಾಸಿ ಶಶಿಧರ್ ಎಂಬವರಿಗೆ ವಂಚನೆಯಾಗಿದೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಶಶಿಧರ್ (31) ಶಿರಿಯಾರ ಗ್ರಾಮ, ಬ್ರಹ್ಮಾವರ ಇವರು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಬೆಂಗಳೂರಿನ BBM ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಈಗ ಸುಮಾರು15 ದಿನಗಳಿಂದ Work from Home ಕೆಲಸವನ್ನು ಶಿರಿಯಾರದ ಪಿರ್ಯಾದಿದಾರರ ಮನೆಯಲ್ಲಿಯೇ ಮಾಡುತ್ತಿದ್ದು ದಿನಾಂಕ 29/05/2025 ರಂದು ಮೊಬೈಲ್ ನಂಬ್ರ ದಿಂದ ಗೂಗಲ್ ನಲ್ಲಿ ರಿಸ್ಯೂಂ ಕೊಡುವ ಬಗ್ಗೆ ಸಂದೇಶವೊಂದು ಬಂದಿದ್ದು, ಅದರ ಲಿಂಕ್ ಓಪನ್ ಮಾಡಿದಾಗ ಟೆಲಿಗ್ರಾಂ ಆಪ್ಲೇಕೇಶನ್ ನಲ್ಲಿ Sharmai Rani ಎಂಬವರು ಪಿರ್ಯಾದಿದಾರರನ್ನು ಸಂಪರ್ಕಿಸಿ, ಅದರಲ್ಲಿ Kings Digilux Pri.ltd. ಎಂಬ ಗ್ರೂಪ್ ಮಾಡಿ ಅದರಲ್ಲಿ ಟಾಸ್ಕ್ ನೀಡುವ ಬಗ್ಗೆ ಸೂಚನೆಯನ್ನು ನೀಡಿದ್ದು, ಮೊದಲಿಗೆ ಪಿರ್ಯಾದಿದಾರರು ಟಾಸ್ಕ್ ಕಂಪ್ಲೀಟ್ ಮಾಡಿದ ಬಗ್ಗೆ ಹಣ ಮರುಪಾವತಿಗೊಂಡಿದ್ದು, ಆ ಬಳಿಕ ಆರೋಪಿಗಳು ಟಾಸ್ಕ್ ನಡೆಸುವಂತೆ ಮತ್ತು ಹಣ ಪಾವತಿಸುವಂತೆ ಹಲವಾರು ಬ್ಯಾಂಕ್ ಖಾತೆಗಳನ್ನು ನೀಡಿದ್ದು, ಆರೋಪಿಗಳು ಸೂಚಿಸಿರುವುದು ಪಿರ್ಯಾದಿದಾರರು ನಿಜವೆಂದು ನಂಬಿ ಹಂತ ಹಂತವಾಗಿ ದಿನಾಂಕ 30/05/2025 ರಿಂದ ದಿನಾಂಕ 12/06/2025 ರ ಮದ್ಯಾವದಿಯಲ್ಲಿ UPI ಟ್ರಾನ್ಸೆಕ್ಷನ್ ಮುಖೇನ ರೂಪಾಯಿ 7,93,095/- ಮತ್ತು IMPS & ITGRS ಮುಖೇನ ರೂಪಾಯಿ 20,08,000/- ಹಣದಂತೆ ಒಟ್ಟು ರೂ. 28,01,095/- ಹಣವನ್ನು ಆರೋಪಿಗಳ ಖಾತೆಗೆ ಪಾವತಿಸಿರುತ್ತಾರೆ. ಆರೋಪಿಗಳು ಟಾಸ್ಕ್ ನಡೆಸಿ, ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ, ಹಣವನ್ನು ಪಡೆದು ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 116/2025 ಕಲಂ: 66 (C), 66(D) IT Act ರಂತೆ ಪ್ರಕರಣ ದಾಖಲಾಗಿರುತ್ತದೆ.