ಉಡುಪಿ : ಬ್ರಹ್ಮಾವರ ತಾಲ್ಲೂಕಿನ ಹಿಲಿಯಾಣ ಗ್ರಾಮದ ಆಮ್ರಕಲ್ಲು ಪ್ರದೇಶದಲ್ಲಿನ ಸರ್ಕಾರಿ ಹಾದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ.10ರಂದು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಶಂಕರನಾರಾಯಣ ಠಾಣಾ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬ್ರಹ್ಮಾವರ ತಾಲೂಕು ಹಿಲಿಯಾನ ಗ್ರಾಮದ ಆಮ್ರಕಲ್ಲು ನಿವಾಸಿ ನಾರಾಯಣ ನಾಯ್ಕ ಬಂಧಿತ ಆರೋಪಿ.
ಪರವಾನಿಗೆ ಇಲ್ಲದೇ ಮಾರಾಟ ಮಾಡುತ್ತಿದ್ದ Mysore Lancer Whisky ಬ್ರಾಂಡ್‌ನ 70 ಟೆಟ್ರಾ ಪ್ಯಾಕ್‌ಗಳನ್ನು ಹಾಗೂ ನಗದು ರೂ.430/-ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ.3,930/- ಆಗಿದೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.