Home Crime ಬೈಂದೂರಿನಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು : 400 ಕೆಜಿ ಅಕ್ಕಿ ವಶ…!!

ಬೈಂದೂರಿನಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು : 400 ಕೆಜಿ ಅಕ್ಕಿ ವಶ…!!

ಬೈಂದೂರು: ಆಹಾರ ನಿರೀಕ್ಷಕರಾದ ವಿನಯಕುಮಾರ್ ಅವರ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ದಾಸ್ತಾನು ಮಾಡಿದ ಪ್ರಕರಣ ದಾಖಲಾಗಿದೆ.

ಬಿಜೂರು ಗ್ರಾಮದ ಹರಕೇರಿ ಪ್ರದೇಶದಲ್ಲಿ ಆರೋಪಿಗಳಾದ ಅಬ್ದುಲ್ ಮಜೀದ ಹಾಗೂ ಐಶಾ ವಾಸೀಂ ಅವರು KA-15-8917 ಸಂಖ್ಯೆಯ ಮೂರು ಚಕ್ರದ ಗೂಡ್ಸ್ ವಾಹನದಲ್ಲಿ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದಾರೆ ಎಂಬ ಮಾಹಿತಿ ಆಹಾರ ನಿರೀಕ್ಷಕರಿಗೆ ಲಭಿಸಿತ್ತು.

ಈ ಮಾಹಿತಿ ಆಧಾರವಾಗಿ ದಿನಾಂಕ 07-03-2026 ರಂದು ಬೆಳಿಗ್ಗೆ 9:30 ಗಂಟೆಗೆ ದಾಳಿ ನಡೆಸಿದ ಅಧಿಕಾರಿಗಳು, ಆರೋಪಿಗಳು ಯಾರಿಂದಲೋ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿಟ್ಟಿದ್ದುದನ್ನು ಪತ್ತೆಹಚ್ಚಿದರು.

ದಾಳಿಯ ವೇಳೆ ಒಟ್ಟು 400 ಕೆಜಿ ತೂಕದ, ರೂ. 9,200 ಮೌಲ್ಯದ 15 ಪಾಲಿಥಿನ್ ಚೀಲಗಳಲ್ಲಿ ತುಂಬಿದ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಅಕ್ಕಿಯನ್ನು ತಲ್ಲೂರು TAMPMC ಗೋಡಾಮಿಗೆ ಜಮಾ ಮಾಡಲಾಗಿದೆ.

ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.