Home Crime ನೇಣು ಬಿಗಿದು ಆತ್ಮಹತ್ಯೆ ಯುವಕ…!!

ನೇಣು ಬಿಗಿದು ಆತ್ಮಹತ್ಯೆ ಯುವಕ…!!

ಮಂಗಳೂರು ನಗರ ಹೊರ ವಲಯದ ಪಡೀಲ್‌ನಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಪಡೀಲ್ ಕೊಡೆಕ್ಕಲ್ ನಿವಾಸಿ ಶ್ರವಣ್(26) ಎಂದು ಗುರುತಿಸಲಾಗಿದೆ.

ಶ್ರವಣ್ ಅವರ ಮೃತದೇಹ ಪಡೀಲ್ ಕೊಡೆಕ್ಕಲ್ ಬಳಿ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಕಂಕನಾಡಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.