Home Crime ಸುಳ್ಯ: ವಿವಾಹಿತ ಮಹಿಳೆ ಸಂಶಯಾಸ್ಪದ ಸಾವು ಪ್ರಕರಣ : ಅತ್ತೆ, ಮಾವ, ನಾದಿನಿ ಅರೆಸ್ಟ್‌…!!

ಸುಳ್ಯ: ವಿವಾಹಿತ ಮಹಿಳೆ ಸಂಶಯಾಸ್ಪದ ಸಾವು ಪ್ರಕರಣ : ಅತ್ತೆ, ಮಾವ, ನಾದಿನಿ ಅರೆಸ್ಟ್‌…!!

ಪುತ್ತೂರು, ಜುಲೈ 23: ಕೌಟುಂಬಿಕ ಕಿರುಕುಳದಿಂದ ಸಾವಿಗೀಡಾಗಿದ್ದಾಳೆ ಎನ್ನಲಾದ ಸುಳ್ಯದ ಸಂಪಾಜೆಯ ಮಹಿಳೆಯ ಅಸಹಜ ಸಾವಿನ ಪ್ರಕರಣದಲ್ಲಿ ಸುಳ್ಯ ಪೊಲೀಸರು ಆಕೆಯ ಮಾವ, ಅತ್ತೆ ಮತ್ತು ನಾದಿನಿಯನ್ನು ಬಂಧನ ಮಾಡಿದ್ದಾರೆ.

ಪೊಲೀಸರು ಇದೀಗ ಮಾವ ಸಿಪಿ ಅಳವಿ (54), ಅತ್ತೆ ಆಯಿಷಾ ಸಿಎ ಹಾಗೂ ನಾದಿನಿ ಫಸೀಲಾ ಸಿಎ (29) ಎಂಬುವವರನ್ನು ಬಂಧನ ಮಾಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಫಾತಿಮಾಳನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಅತ್ತೆ ಮಾವ ಮತ್ತು ನಾದಿನಿ ನಿರಂತರ ಕಿರುಕುಳ ನೀಡಿದ್ದಲ್ಲದೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಮೊನ್ನೆ ಜುಲೈ 18ರಂದು ರಾತ್ರಿ ತನ್ನ ತಾಯಿ ಜೊತೆಗೆ ಫಾತಿಮಾ ಮಾತನಾಡುತ್ತಿದ್ದಾಗಲೇ ಮಾವ ಅಳವಿ ಫೋನ್‌ ಕಿತ್ತುಕೊಂಡು ನಿನ್ನ ಮಗಳನ್ನು ಕೊಂದೇ ತೀರುತ್ತೇನೆಂದು ಹೇಳಿದ್ದರು. ಮರುದಿನ ಬೆಳಗ್ಗೆ ನೋಡಿದರೆ ಫಾತಿಮಾ ಮೃತಪಟ್ಟ ಸ್ಥಿತಿಯಲ್ಲಿದ್ದಳು.

ಇದೀಗ ಮೂವರ ಬಂಧನವಾಗಿದ್ದು, ವಿಚಾರಣೆ ನಂತರ ಸಾವಿನ ಕಾರಣ ತಿಳಿಯಲಿದೆ.