ಮಂಗಳೂರು: ತಣ್ಣೀರುಬಾವಿ ಟೀ ಪಾರ್ಕ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ಮಾಡತ್ತಿದ್ದ ಆರೋಪದಲ್ಲಿ ಮೂವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಜಾಕೀರ್, ಮಹಮ್ಮದ್ ಹನೀಫ್ ಹಾಗೂ ಶಿಫಾನ್ ಪ್ರಕರಣದ ಆರೋಪಿಗಳು. ಡಿ. 12ರಂದು ಬೆಳಗ್ಗೆ 9.45ರ ವೇಳೆಗೆ ತಣ್ಣೀರುಬಾವಿ ಟೀ ಪಾರ್ಕ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮರದ ಕೆಳಗಡೆ ದ್ವಿಚಕ್ರ ವಾಹನವೊಂದರಲ್ಲಿ ಮೂವರು ಆರೋಪಿಗಳು ಲಾರಿ ಚಾಲಕರುಗಳಿಗೆ, ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪಣಂಬೂರು ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.



