Home Crime ಕುರ್ಕಾಲು ಬಳಿ ಸರಣಿ ಅಪಘಾತ : ಮೂರು ಕಾರುಗಳು ಜಖಂ…!!

ಕುರ್ಕಾಲು ಬಳಿ ಸರಣಿ ಅಪಘಾತ : ಮೂರು ಕಾರುಗಳು ಜಖಂ…!!

ಕಟಪಾಡಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ  ಭೀಕರ ಅಪಘಾತ ನಡೆದು ಐವರು ಅಸುನೀಗಿದ್ದರು. ಅಲ್ಲಿಂದ ಸ್ವಲ್ಪ ದೂರ ಮತ್ತೊಂದು ಸರಣಿ ಅಪಘಾತ ಸಂಭವಿಸಿ ಸಾರ್ವಜನಿಕರು ಆತಂಕ ಗೊಂಡಿದ್ದಾರೆ.

ಕಟಪಾಡಿಯಿಂದ ಶಿರ್ವ ಕಡೆಗೆ ತೆರಳುತ್ತಿದ್ದಾಗ ಈ ಸರಣಿ ಅಪಘಾತ ಸಂಭವಿಸಿದೆ.

ಕುರ್ಕಾಲು ಪರಿಸರದಲ್ಲಿ, ಕಾರೊಂದು ಏಕಾಏಕಿ ಬಲ ಮಗ್ಗುಲಿಗೆ ತಿರುಗಿದಾಗ, ಹಿಂದಿನಿಂದ ಬಂದ ಇತರ ಎರಡು ಕಾರುಗಳು ಡಿಕ್ಕಿಯಾಗಿದೆ. ಒಟ್ಟು 3 ಕಾರುಗಳು ಅಪಘಾತದಲ್ಲಿ ಜಖಂಗೊಂಡಿವೆ.

ಕಾರುಗಳಲ್ಲಿದ್ದ ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನಿನ್ನೆ ಈ ಪರಿಸರದಲ್ಲಿ ಅನೇಕ ಜಾತ್ರೆ ಸಮಾರಂಭಗಳು ಇದ್ದ ಕಾರಣ ವಾಹನ ಸಂಚಾರ ದಟ್ಟವಾಗಿತ್ತು.