Home Crime ಪಡುಬಿದ್ರಿ : ಖಾಸಗಿ ಬಸ್ ಆಟೋ ರಿಕ್ಷಾಕ್ಕೆ ಢಿಕ್ಕಿ : ಓರ್ವ ಮೃತ್ಯು : ಇನ್ನೋರ್ವ...

ಪಡುಬಿದ್ರಿ : ಖಾಸಗಿ ಬಸ್ ಆಟೋ ರಿಕ್ಷಾಕ್ಕೆ ಢಿಕ್ಕಿ : ಓರ್ವ ಮೃತ್ಯು : ಇನ್ನೋರ್ವ ಗಂಭೀರ…!!


ಪಡುಬಿದ್ರಿ: ಉಡುಪಿ ಜಿಲ್ಲೆಯ ‌ಪಡುಬಿದ್ರಿ ಸಮೀಪ ಅಟೋ ರಿಕ್ಷಾದಲ್ಲಿ ಗೆಳೆಯನನ್ನು ಬೇಂಗ್ರೆಯ ಮನೆಗೆ ಬಿಟ್ಟು ಬರಲು ಪಡುಬಿದ್ರಿ ಜಂಕ್ಷನ್ ಬಳಿ ಅಟೋ ತಿರುಗುತ್ತಿದಂತೆ ಉಡುಪಿ ಕಡೆಯಿಂದ ಮುನ್ನುಗ್ಗಿ ಬಂದ ಖಾಸಗಿ ಬೆಂಗಳೂರು ಬಸ್ ಪ್ರಗತಿ ನೇರವಾಗಿ ಡಿಕ್ಕಿಯೊಡೆದ ಪರಿಣಾಮ ಆಟೋ ಚಾಲಕ ಯಾನೇ ಮ್ಯಾಕನಿಕ್ ತಲೆಗೆ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಇನ್ನೋರ್ವ ಅವರ ಗೆಳೆಯ ಮುಕ್ಕ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.

ಮೃತ ಯುವಕ ಪಾದೆಬೆಟ್ಟು ನಿವಾಸಿ ನಂದಿಕೂರಿನ ಬಜಾಜ್ ಸರ್ವಿಸ್ ಸೆಂಟರ್ ನಲ್ಲಿ ಮ್ಯಾಕಾನಿಕ್ ವೃತ್ತಿ ನಡೆಸುತ್ತಿದ್ದ ಮನೋಹರ್ ಟಿ.ಕೋಟ್ಯಾನ್(45), ಗಾಯಗೊಂಡವರು ಬೇಂಗ್ರೆ ನಿವಾಸಿ ಜಯ ಬೇಂಗ್ರೆ, ಮನೋಹರ್ ವಿವಾಹಿತರಾಗಿದ್ದರೂ ಕೂಡಾ ಯಾವುದೋ ಕಾರಣಕ್ಕೆ ಗಂಡ ಹೆಂಡತಿ ದೂರವಾಗಿದ್ದರು, ಸುಮಾರು 14 ವರ್ಷ ಪ್ರಾಯದ ಮಗನೊಬ್ಬನಿದ್ದು ಆತ ತಂದೆಯೊಂದಿಗೆ ವಾಸವಿದ್ದ ಎಂಬುದಾಗಿ ಇವರ ಗೆಳೆಯರು ತಿಳಿಸಿದ್ದಾರೆ.

ಈ ದಿನ ಬಂಟರ ಸಂಘದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಇವರು ರಾತ್ರಿ ಏಳರ ತನಕ ಅಲ್ಲೇ ಇದ್ದರು ಎಂಬುದಾಗಿ ಸಂಘಟನಾ ಪ್ರಮುಖರು ತಿಳಿಸಿದ್ದಾರೆ.

ಪಡುಬಿದ್ರಿ ಜಂಕ್ಷನ್ ಬಹಳ ಅಪಾಯಕಾರಿಯಾಗಿ ಬಹಳಷ್ಟು ಅಮಾಯಕರ ಪ್ರಾಣಗಳನ್ನು ಬಲಿ ಪಡೆದಿದ್ದು, ಈ ಹಿಂದೆ ಫ್ಲೈ ಒವರ್ ಈ ಭಾಗದಲ್ಲಿ ಆಗ ಬೇಕಾಗಿದ್ದರೂ ಕೆಲವರು ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಅದು ರದ್ದಾಗಿತ್ತು, ಇದೀಗ ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರ ಆಕ್ರೋಶ ಪ್ಲೈ ಒವರ್ ವಿರೋಧಿಗಳ ವಿರುದ್ಧ ತಿರುಗಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರ

ಶವವನ್ನು ಮಂಗಳೂರಿನ ಆಸ್ಪತ್ರೆಯಿಂದ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇತ್ರದ ಶವಾಗಾರಕ್ಕೆ ತಡರಾತ್ರಿ 12-30ರ ಸುಮಾರಿಗೆ ತರಲಾಗಿದ್ದು, ಬೆಳಗ್ಗೆ 10 ರ ಸುಮಾರಿಗೆ ಶವವನ್ನು ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಕಾರ್ಯಕರ್ತರೆಲ್ಲಾ ಸೇರಿ ಪಾದೆಬೆಟ್ಟು ಮನೆಗೆ ಸಾಗಿಸಲಾಗುವುದು ಎಂಬುದಾಗಿ ಸಂಘಟನೆಯಿಂದ ತಿಳಿದು ಬಂದಿದೆ.