Home Crime ಪಡುಬಿದ್ರಿ : ಬಾರ್ ನಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ…!!

ಪಡುಬಿದ್ರಿ : ಬಾರ್ ನಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ…!!

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಬಾರ್ ಒಂದರಲ್ಲಿ ಇಬ್ಬರ ನಡುವೆ ಜಗಳ ನಡೆದು ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.

ಹಲ್ಲೆ ಮಾಡಿದ ಆರೋಪಿ ಅಲಗೇಶ್ ಎಂದು ಗುರುತಿಸಲಾಗಿದೆ.

ಸಾಂತೂರು ನಿವಾಸಿ ಸತೀಶ್ ಎಂಬವರ ಮೇಲೆ  ಚೂರಿಯಿಂದ ಹಲ್ಲೆಯಾಗಿದೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಸತೀಶ್‌ (45) ಸಾಂತೂರು ಅಂಚೆ ಮತ್ತು ಗ್ರಾಮ, ಕಾಪು ಈವರು ಹಾಗೂ ಆರೋಪಿ ಅಲಗೇಶ್‌ ಈತನಿಗೆ 3 ವರ್ಷಗಳ ಹಿಂದೆ ಕಾಂಜಾರಕಟ್ಟೆಯಲ್ಲಿ ಉತ್ತರ ಪ್ರದೇಶದ ಹುಡುಗನೊಬ್ಬನಿಗೆ ಆರೋಪಿ ಹಲ್ಲೆ ನಡೆಸಿದ್ದನ್ನು ಪಿರ್ಯಾದಿದಾರರು ಪ್ರಶ್ನಿಸಿದ್ದಕ್ಕೆ ಪಿರ್ಯಾದಿದಾರರು ಹಾಗೂ ಆರೋಪಿಗೆ ಗಲಾಟೆ ಆಗಿ, ನಂತರ ರಾಜಿ ಮಾಡಿಕೊಂಡಿದ್ದು, ನಂತರದ ಸಮಯದಲ್ಲಿ ಆರೋಪಿಯು ಪಿರ್ಯಾದಿದಾರರನ್ನು ಕಂಡಾಗ ದ್ವೇಷದಿಂದ ಮಸೆದು ನೋಡಿಕೊಂಡು ಹೋಗುತ್ತಿದ್ದು, ದಿನಾಂಕ 15/07/2025 ರಂದು ರಾತ್ರಿ ವೇಳೆ ಸುಮಾರು 9:10 ಗಂಟೆಗೆ ಪಿರ್ಯಾದಿದಾರರು ತನ್ನ ಸ್ನೇಹಿತರಾದ ನರಸಿಂಹ ಹಾಗೂ ಕಾರ್ತಿಕ್‌ ಎಂಬವರೊಂದಿಗೆ ಕಾಪು ತಾಲೂಕು ಸಾಂತೂರು ಗ್ರಾಮದ ಕಾಂಜರಕಟ್ಟೆ ಗ್ಲೋರಿಯಾ ಬಾರ್‌ನ ಕ್ಯಾಬಿನ್‌ನಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವಾಗ ಆರೋಪಿ ಅಲಗೇಶನು ಸದ್ರಿ ಕ್ಯಾಬಿನ್‌ ಒಳಗೆ ಬಂದು ಪಿರ್ಯಾದಿದಾರರ ಸ್ನೇಹಿತ ನರಸಿಂಹನಿಗೆ ಏರು ಧ್ವನಿಯಲ್ಲಿ ಈಗ ನನ್ನ ಗುರುತು ಸಿಗುವುದಿಲ್ಲವ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದಾಗ ಪಿರ್ಯಾದಿದಾರರು ಆರೋಪಿಗೆ ಯಾಕೆ ನಮ್ಮ ಕ್ಯಾಬಿನ್‌ನ ಒಳಗೆ ಬಂದು ಗಲಾಟೆ ಮಾಡುತ್ತೀಯಾ ಎಂದು ಹೇಳಿ ಕ್ಯಾಬಿನ್‌ನಿಂದ ಹೊರಗೆ ದೂಡಿದಾಗ ಆರೋಪಿ ಕೋಪಗೊಂಡು ನೀನು ನರಸಿಂಹನಿಗೆ ಸಪೋರ್ಟ್‌ ಮಾಡುತ್ತಿಯಾ ನಿನ್ನನ್ನು ಕೊಲ್ಲುವುದಾಗಿ ಎಂದು ಹೇಳಿ ಆರೋಪಿ ತನ್ನ ವಶ ಇದ್ದ ಚೂರಿಯಿಂದ ಪಿರ್ಯಾದಿದಾರರ ತಲೆಗೆ ಹಾಗೂ ಹೊಟ್ಟೆಗೆ ತಿವಿದು ಕೊಲೆಗೆ ಪ್ರಯತ್ನಪಟ್ಟಿದ್ದು, ಪರಿಣಾಮ ಪಿರ್ಯಾದಿದಾರರಿಗೆ ಹೊಟ್ಟೆಗೆ ಹಾಗೂ ತಲೆಯ ಎಡಬದಿಗೆ ಕಿವಿಯ ಬಳಿ ರಕ್ತಗಾಯವುಂಟಾಗಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2025 ಕಲಂ: 115(2),351(2), 118(1), 352,109 ಬಿ ಎನ್‌ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.