ಮಣಿಪಾಲ: ಈಶ್ವರ ನಗರ ನಗರಸಭೆಯ ಕುಡಿಯುವ ನೀರಿನ ಘಟಕದೊಳಗೆ ನುಗ್ಗಿದ ಹೊಸ ಕಾರ್ ಈಶ್ವರ ನಗರದ ನಗರಸಭೆಗೆ ಸೇರಿದ ಶುದ್ದ ಕುಡಿಯುವ ನೀರಿನ ಘಟಕದ ಒಳಗೆ ನಿನ್ನೆ ಮಧ್ಯರಾತ್ರಿ ದಾರಿ ತಪ್ಪಿ ರಾಷ್ಟ್ರೀಯ ಹೆದ್ದಾರಿಯನ್ನ ಬಿಟ್ಟು ಘಟಕದ ಒಳಗೆ ನುಸುಳಿದೆ.
ಕಾರು ಮಣಿಪಾಲದಿಂದ. ಆತ್ರಾಡಿ ಕಡೆಗೆ.. ಚಲಿಸುತ್ತಿತ್ತು. ಕಾರು ಗುದ್ದಿದ ರಭಸಕ್ಕೆ. ಕಾರಿನ ಏರ್ ಬ್ಯಾಗ್. ಓಪನ್ ಆಗಿದ್ದು ಕಾರಿನಲ್ಲಿ ಇದ್ದವರಿಗೆ ತಲೆಗೆ ಏಟಾಗಿದ್ದು ಆಸ್ಪತ್ರೆಗೆ ಸೇರಿದ್ದಾರೆ, ಉಡುಪಿಯ ರಿಜಿಸ್ಟ್ರೇಷನ್ ಹೊಂದಿರುತ್ತದೆ KA 20 ME8968. ತಿಳಿದು ಬಂದಿದೆ.
ಕಾರಿನಲ್ಲಿ ಹದಿಹರೆಯದ ವಿದ್ಯಾರ್ಥಿಗಳಿದ್ದರು, ಅವರು ಗಾಯ ಗೊಂಡಿದ್ದಾರೆ ಎಂದು ತಿಳಿದಿದೆ. ಪದೇ ಪದೇ ಇದೇ ಭಾಗದಲ್ಲಿ. ಅಪಘಾತ ಸಂಭವಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ (169A) . ಕಾಮಗಾರಿ ಬಾಕಿ ಇರಿಸಿಕೊಂಡಿದ್ದು. ಇಲ್ಲಿ ಯಾವುದೇ ತಡೆಗೋಡೆ ನಿರ್ಮಿಸದೆ ಇರುವುದು. ಅಪಘಾತಕ್ಕೆ ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯ ಕೈಗನ್ನಡಿಯಾಗಿದೆ, ನಗರಸಭೆಯ ಕುಡಿಯುವ ನೀರಿನ ಮೊದಲ ಘಟಕ ಮಣಿಪಾಲದ ಆಸ್ಪತ್ರೆಗೆ ಒಡಂಬಡಿಕೆಯಾಗಿದ್ದು. ಖಾಸಗಿ ನಿರ್ವಹಣೆಯಲ್ಲಿ ಇದೆ.. ಈ ಘಟಕಕ್ಕೆ ಸೂಕ್ತವಾದ. ಬೇಲಿ ನಿರ್ಮಾಣ ಮಾಡದಿರುವುದೇ. ಮೂಲ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲವಾಗುತ್ತದೆ ಎಂದು. ತರಾತುರಿಯಲ್ಲಿ. ಕಾಮಗಾರಿ ರಸ್ತೆಗೆ ಬಿಟ್ಟು ಕೊಟ್ಟಿರುವುದರಿಂದ. ನಂತರದ ದಿನಗಳಲ್ಲಿ. ರಸ್ತೆ ಕಾಮಗಾರಿ ಮುಂದುವರಿಸಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ. ಮಣಿಪಾಲದ ಮೇಲಿಂದ ಬರುವ ವಾಹನ ಚಾಲಕರಿಗೆ ಇಲ್ಲಿ ತೆರೆದ ರಸ್ತೆಯಂತೆ ಕಾಣುತ್ತದೆ, ರಾಷ್ಟ್ರೀಯ ಹೆದ್ದಾರಿ ಯಾಗಿರುವುದರಿಂದ ವೇಗವಾಗಿ ಚಲಿಸುವ ವಾಹನಗಳು ಇಲ್ಲಿ ದಿಕ್ಕು ತಪ್ಪಿಸುತ್ತದೆ. ಸಂಘ ಸಂಸ್ಥೆಗಳು ಬೋರ್ಡ್ ಹಾಕಿದರು.. ರಾಷ್ಟ್ರೀಯ ಹೆದ್ದಾರಿಯ. ಯಾವುದೇ ತಡೆ ಬೇಲಿ ಇಲ್ಲದಂತಾಗಿದೆ.. ನಗರ ಸಭೆನೂ ನಿರ್ಲಕ್ಷ ಒಂದನೇ ಘಟಕವನ್ನು ಖಾಸಗಿ ಅವರಿಗೆ ನೀಡಿದರಿಂದ. ಇಲ್ಲಿ ತರಾತುರಿಯಲ್ಲಿ. ಘಟಕದ ಗೋಡೆಯನ್ನ ಕೆಡವಿದ್ದಾರೆ.
ನಂತರ ಈ ಘಟಕಕ್ಕೆ ಸೂಕ್ತ ಬೇಲಿ ನಿರ್ಮಿಸಿ ಇಲ್ಲ. ಮೇಲಿಂದ ಬರುವ ವಾಹನ ಚಾಲಕರು ದಿಕ್ಕು ತಪ್ಪು ತಪ್ಪುತ್ತಾರೆ.. ಹೆಚ್ಚಿನ ವಾಹನಗಳು ಇಲ್ಲಿ ಅಪಘಾತವಾಗುತ್ತದೆ. ಖ್ಯಾತ ತುಳುನಾಡ ನಾಟಕ ಕಲಾವಿದ ಭೋಜರಾಜ್ ವಾಮಂಜೂರು ಕೂಡ.. ಈ ಹಿಂದೆ ಇದೇ ಸ್ಥಳದಲ್ಲಿ ವಾಹನ ಅಪಘಾತವಾಗಿದೆ, ಒಟ್ಟಿನಲ್ಲಿ. ಪದೇ ಪದೇ ಈ ಪ್ರದೇಶದಲ್ಲಿ ವಾಹನ ಅಪಘಾತವಾಗುವುದಕ್ಕೆ ರಾಷ್ಟ್ರೀಯ ಹೆದ್ದಾರಿಯ ಕುಂಠಿತ ಕಾಮಗಾರಿಯೇ ಕಾರಣ. ಜಿಲ್ಲಾಡಳಿತ ಹಳೆಯ ರಸ್ತೆಯಲ್ಲಾದರೂ ಕಾಮಗಾರಿ ಮುಂದುವರಿಸಿದರೆ ಸಮಸ್ಯೆ ಬಗೆಹರಿಯಬಹುದು. ಎಂದು ಸ್ಥಳೀಯರ ಅಭಿಪ್ರಾಯ ಪಟ್ಟಿದ್ದಾ ರೆ.






