Home Crime ಕೋಟ : ಹಣದ ಬ್ಯಾಗ್ ಕಳವು…!!

ಕೋಟ : ಹಣದ ಬ್ಯಾಗ್ ಕಳವು…!!

ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ವ್ಯಕ್ತಿಯೋರ್ವರ ಮನೆಯ ಸಿಟೌಟ್ ನಲ್ಲಿ ಇಟ್ಟಿದ್ದ ಹಣದ ಬ್ಯಾಗ್ ನ್ನು ಯಾರೂ ಕಳ್ಳರು ಕಳ್ಳತನ ಮಾಡಿದ ಘಟನೆ ನಡೆದಿದೆ.

ಶಿರಿಯಾರು ಗ್ರಾಮದ ನಿವಾಸಿ ಬಿ ರವಿಶಂಕರ್ ಭಟ್ ಎಂಬವರ ಹಣದ ಬ್ಯಾಗ್ ಕಳವು ಆಗಿದೆ ಎಂದು ತಿಳಿದು ಬಂದಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿ ಬಿ ರವಿಶಂಕರ ಭಟ್‌ (64) ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಶಿರಿಯಾರ ಪೇಟೆಯಲ್ಲಿ ವಿನಾಯಕ ಸ್ಟೋರ್‌ ಎಂಬ ಹೆಸರಿನ ದಿನಸಿ ಅಂಗಡಿ ವ್ಯವಹಾರ ನಡೆಸಿಕೊಂಡಿದ್ದು ದಿನಾಂಕ: 23.10.2025 ರಂದು ರಾತ್ರಿ 8.30 ಗಂಟೆಗೆ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ ಬಾಬ್ತು ನಗದು ಅಂದಾಜು ರೂ 1,25,000/- ಹಣವನ್ನು ನೀಲಿ ಬಣ್ಣದ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಅಂಗಡಿಗೆ ಬೀಗವನ್ನು ಹಾಕಿ ಸುಮಾರು 5 ರಿಂದ 6 ನಿಮಿಷದ ಒಳಗೆ ಮನೆಗೆ ಬಂದು ಮನೆಯ ಸಿಟೌಟ್‌ ನಲ್ಲಿ ಬ್ಯಾಗ್‌ ನ್ನು ಇರಿಸಿ ಕಾಲು ತೊಳೆಯುವರೇ ಮನೆಯ ಬಲಭಾಗದಲ್ಲಿದ್ದ ನಲ್ಲಿ ಬಳಿ ಹೋಗಿ ಬರುವಷ್ಟರಲ್ಲಿ ತಾರೋ ಅಪರಿಚಿತ ಕಳ್ಳರು ಸಿಟೌಟ್‌ ನಲ್ಲಿದ್ದ ಬ್ಯಾಗನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 194/2025 ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.