Home Crime ಗ್ಯಾಸ್ ಸೋರಿಕೆ : ಸ್ನಾನಕ್ಕೆ ತೆರಳಿದ ಸಹೋದರಿಯರು ದಾರುಣ ಮೃತ್ಯು…!!

ಗ್ಯಾಸ್ ಸೋರಿಕೆ : ಸ್ನಾನಕ್ಕೆ ತೆರಳಿದ ಸಹೋದರಿಯರು ದಾರುಣ ಮೃತ್ಯು…!!

ಮೈಸೂರು :  ನಗರದ ಸಮೀಪ ಸ್ನಾನಕ್ಕೆಂದು ತೆರಳಿದ್ದ ಸಹೋದರಿಯರಿಬ್ಬರು ಗ್ಯಾಸ್ ಗೀಸರ್ ಸೋರಿಕೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ಸಂಭವಿಸಿದೆ.

ಗುಲ್ಫಾರ್ಮ್(23) ಮತ್ತು ಸಿಮ್ರಾನ್ ತಾಜ್ (20) ಮೃತಪಟ್ಟವರು. ಇವರಿಬ್ಬರೂ ಸ್ನಾನಕ್ಕೆಂದು ಬಾತ್ ರೂಮ್‌ಗೆ ತೆರಳಿದ್ದರು. ಆದರೆ ಎಷ್ಟೇ ಹೊತ್ತಾದರೂ ಹೊರಬಂದಿರಲಿಲ್ಲ. ತಂದೆ ಬಾಗಿಲು ಒಡೆದು ನೋಡಿದಾಗ ಇಬ್ಬರೂ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ತಕ್ಷಣ ಇವರಿಬ್ಬರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ.