Home Crime ಅಭಿಷೇಕ್ ಆಚಾರ್ಯನ ಬದುಕಲ್ಲಿ ಆಟವಾಡಿದ ಯುವತಿ ನಿರೀಕ್ಷಾ ಸೆರೆ : ಕದ್ರಿ ಪೊಲೀಸ್ ಠಾಣೆಯಲ್ಲಿ ಕೇಸ್

ಅಭಿಷೇಕ್ ಆಚಾರ್ಯನ ಬದುಕಲ್ಲಿ ಆಟವಾಡಿದ ಯುವತಿ ನಿರೀಕ್ಷಾ ಸೆರೆ : ಕದ್ರಿ ಪೊಲೀಸ್ ಠಾಣೆಯಲ್ಲಿ ಕೇಸ್

ಮಂಗಳೂರು : ಕಾರ್ಕಳದ ನಿಟ್ಟೆ ಗ್ರಾಮದ ಯುವಕ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಆತನ ಬದುಕಲ್ಲಿ ಆಟವಾಡಿದ ಯುವತಿ ನಿರೀಕ್ಷಾಳನ್ನು ಕೊನೆಗೂ ಬಂಧಿಸಲಾಗಿದೆ.

ಮಂಗಳೂರಿನ ಯುವತಿ ನಿರೀಕ್ಷಾಳನ್ನು ಕದ್ರಿ ಪೊಲೀಸರು ಮಂಗಳೂರಿನಲ್ಲಿ ವಶಕ್ಕೆ ಪಡೆದಿರುವ ಮಾಹಿತಿ ದೊರೆತಿದೆ.

ಅಭಿಷೇಕ್ ಆಚಾರ್ಯ ನನ್ನು ನಿರೀಕ್ಷಾ ಹನಿ ಟ್ರ್ಯಾಪ್ ಗೆ ಒಳಪಡಿಸಿ ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದಳು, ಇದರಿಂದ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಡೆತ್ ನೋಟ್ ನಲ್ಲಿ ಯುವತಿ ನಿರೀಕ್ಷಾ ಸೇರಿ 4 ಹೆಸರುಗಳನ್ನು ಉಲ್ಲೇಖಿಸಿದ್ದು, ಇದೀಗ ಯುವತಿಯನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.