ಉಡುಪಿ : ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಅಕ್ರಮ ಮರಳು ಸಾಗಟ ಮಾಡುತ್ತಿದ್ದವರ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ.
ಪೊಲೀಸರು ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ಕೆಲವು ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಾಟಗಾರರ ವಿರುದ್ಧ ಪ್ರಕರಣಗಳು ದಾಖಲಾಗಿದೆ.
ಪ್ರಕರಣದ ವಿವವರಗಳು : ಬ್ರಹ್ಮಾವರ : ದಿನಾಂಕ 11.08.2025 ರಂದು ಯಡ್ತಾಡಿ ಕಡೆಯಿಂದ ಹೇರಾಡಿ ಕಡೆಗೆ ಅಕ್ರಮ ಮರಳು ಸಾಗಾಟದ ಬಗ್ಗೆ ಬಂದ ಮಾಹಿತಿಯಂತೆ ಬ್ರಹ್ಮಾವರ ಪೊಲೀಸರು 19:10 ಗಂಟೆಗೆ KA20AB2898ನೇ TATA ಕಂಪೆನಿಯ 610 ಟಿಪ್ಪರ್ ಟೆಂಪೋ ವಾಹನವನ್ನು ತಡೆದಿದ್ದು, ಸದ್ರಿ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ವಾಹನ ಚಾಲಕನು ವಾಹನವನ್ನು ನಿಲ್ಲಿಸಿ, ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ ಸುಮಾರು ಒಂದೂವರೆ ಯುನಿಟ್ ಮರಳು ಇದ್ದು, ಚಾಲಕ ಅಮೃತ್.ಎಸ್‌ರವರಲ್ಲಿ ದಾಖಲೆ ಕೇಳಲಾಗಿ ಯಾವುದೇ ದಾಖಲೆ ಹಾಗೂ ಪರವಾನಿಗೆ ಕೂಡ ಇರುವುದಿಲ್ಲ ತಿಳಿಸಿರುತ್ತಾರೆ. ಆರೋಪಿತನು ಯಾವುದೇ ಪರವಾನಿಗೆ ಹೊಂದದೇ, ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸಿದೇ ಎಲ್ಲಿಯೋ ನದಿಯಿಂದ ಸರಕಾರದ ಸೊತ್ತಾದ ಸುಮಾರು ಒಂದೂವರೆ ಯೂನಿಟ್ ಅಂದಾಜು 8000/- ಮೌಲ್ಯದ ಮರಳನ್ನು ಕಳ್ಳತನದಿಂದ ತೆಗೆದು ಆ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಕಂಡು ಬಂದಿರುವುದರಿಂದ ಬ್ರಹ್ಮಾವರ ಠಾಣೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 171/2025 ಕಲಂ: 4(1), 4(1A), 21(1) (2) MMRD ACT AND US 3(1), 42(1), 44 KMMC RULE 1944 AND US 303(2) BNSರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಬ್ರಹ್ಮಾವರ : ದಿನಾಂಕ 07/08/2025 ರಂದು ಅಕ್ರಮ ಮರಳು ಸಾಗಾಟದ ಬಗ್ಗೆ ಬಂದ ಮಾಹಿತಿಯಂತೆ ಬೆಳಿಗ್ಗೆ 00:45 ಗಂಟೆಗೆ ಕುಕ್ಕುಡೆ ISF ಪ್ಯಾಕ್ಟರಿ ಬಳಿ ಕುಕ್ಕುಡೆ ಕಡೆಯಿಂದ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಕಡೆಗೆ KA20AB7694 ನೇ TATA ಕಂಪೆನಿಯ 610 ಟಿಪ್ಪರ್ ಟೆಂಪೋ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಸದ್ರಿ ವಾಹನದ ಚಾಲಕ ವಾಹನವನ್ನು ನಿಲ್ಲಿಸಿ ಪರಾರಿಯಾಗಿರುತ್ತಾನೆ. ನಂತರ ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ ಸುಮಾರು ¾ ( ಮುಕ್ಕಾಲು) ಯುನಿಟ್ ಮರಳು ಇದ್ದು, ಮರಳು ಒದ್ದೆಯಾಗಿದ್ದು, ನೀರು ಸುರಿಯುತ್ತಿರುವುದು ಕಂಡು ಬಂದಿರುತ್ತದೆ ಅಲ್ಲದೇ ಯಾವುದೇ ದಾಖಲೆ ಹಾಗೂ ಪರವಾನಿಗೆ ಕೂಡ ಪ್ರಸ್ತುತ ಇರುವುದಿಲ್ಲ, ಆರೋಪಿತರು ಯಾವುದೇ ಪರವಾನಿಗೆ ಹೊಂದದೇ, ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸಿದೇ ಕುಕ್ಕುಡೆ ಕಡೆ ಎಲ್ಲಿಯೋ ನದಿಯಿಂದ ಸರಕಾರದ ಸೊತ್ತಾದ ಮರಳನ್ನು ಕಳ್ಳತನದಿಂದ ತೆಗೆದು ಆ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಕಂಡು ಬಂದಿರುವುದರಿಂದ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 166/2025 ಕಲಂ: 4(1), 4(1A), 21(1) (2) MMRD ACT AND US 3(1), 42(1), 44 KMMC RULE 1944 AND US 303(2) BNSರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕುಂದಾಪುರ : ದಿನಾಂಕ: 05/08/2025 ರಂದು ಸಮಯ ಮಧ್ಯಾಹ್ನ 15:30 ಗಂಟೆಗೆ ಸುಮಾರಿಗೆ ಕಸಬಾ ಗ್ರಾಮದ ಬೀಟ್ ಸಿಬ್ಬಂದಿ ಚರ್ಚ ರಸ್ತೆಯ ಬಳಿಯಿರುವ ಪಂಚಗಂಗಾವಳಿ ಹೊಳೆಯಲ್ಲಿ ಮರಳನ್ನು ತೆಗೆದು ಎರಡು ವಾಹನಗಳಲ್ಲಿ ತುಂಬಿಸುತ್ತಿರುವುದಾಗಿ ಬಂದ ಮಾಹಿತಿಯಂತೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಚರ್ಚ ರಸ್ತೆಯ ಸಮೀಪ ಪಂಚ ಗಂಗಾವಳಿ ಹೊಳೆಯ ಬಳಿ ಬಂದಾಗ ಸಮಯ ಸುಮಾರು 16:15 ಗಂಟೆಗೆ 1) ಬಿಳಿ ಬಣ್ಣದ KA 19 AA 2515 ನಂಬ್ರದ ಮಹೇಂದ್ರ ಮ್ಯಾಕ್ಸಿಮೊ ವಾಹನದಲ್ಲಿ 40 ಪ್ಲಾಸ್ಟಿಕ್ ಚೀಲಗಳಲ್ಲಿ ಮರಳನ್ನು ತುಂಬಿಸಿ ಇಟ್ಟಿರುವುದು ಕಂಡುಬಂದಿರುತ್ತದೆ. ಮರಳಿನ ಅಂದಾಜು ಮೌಲ್ಯ 2000/- ರೂ ಆಗಬಹುದು 2) ಸಿಲ್ವರ್ ಬಣ್ಣದ KA 20D2787 TATA ACE ಆಗಿದ್ದು, ಇದರಲ್ಲಿ 40 ಪ್ಲಾಸ್ಟಿಕ್ ಚೀಲಗಳಲ್ಲಿ ಮರಳನ್ನು ತುಂಬಿಸಿ ಇಟ್ಟಿರುವುದು ಕಂಡು ಬಂದಿರುತ್ತದೆ. ಸದ್ರಿ ಮರಳಿನ ಅಂದಾಜು ಮೌಲ್ಯ 2000/- ರೂ ಆಗಬಹುದು. ಆರೋಪಿತರು ಯಾವುದೇ ಪರವಾನಿಗೆ ಇಲ್ಲದೆ ಸುನೀಲ್ ಎಂಬವನ ಜೊತೆ ಸೇರಿ ಪಕ್ಕದಲ್ಲಿರುವ ಪಂಚಗಂಗಾವಳಿ ಹೊಳೆಯಿಂದ ಮರಳನ್ನು ಕಳವು ಮಾಡಿ ತೆಗೆದು ಗೊಣಿ ಚೀಲಗಳೀಗೆ ತುಂಬಿಸಿ ಸಾಗಾಟ ಮಾಡಲು ತುಂಬಿಸಿರುತ್ತಾರೆ, ಎಂಬುದಾಗಿ ಕುಂದಾಪುರ ಪೊಲೀಸ್ ಠಾಣಾ ಅ,ಕ್ರ 303(2).112 BNS ಮತ್ತು 4,4(1)(a) 21 MMDR ACT ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆ ಮಾಡಿ ಆರೋಪಿತರಾದ 1) ಸುಜನ್ ಸಾರಂಗ್(35), ತಂದೆ: ಮೊಹನ್ ಸಾರಂಗ ವಾಸ: ಗಿರಿ ನಿವಾಸ ಮೇಲ್ಕೆರಿ ಖಾರ್ವಿಕೇರಿ ಕಸಬಾ ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ಮತ್ತು 2) ನಿಖಿಲ್(30), ತಂದೆ: ಅಣ್ಣಪ್ಪ ಮೇಸ್ತ ವಾಸ: ಸಂಜೀವ ನಿಲಯ ಮದ್ದು ಗುಡ್ಡೆ ಕಸಬಾ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರುಗಳನ್ನು ಬಂದಿಸಲಾಗಿರುತ್ತದೆ. ಕೃತ್ಯಕ್ಕೆ ಬಳಸಿದ 1) KA19AA2515 ನಂಬ್ರದ ಮಹೇಂದ್ರ ಮ್ಯಾಕ್ಸಿ ಅಂದಾಜು ಮೌಲ್ಯ 1,50,000/- ರೂಪಾಯಿ 2) KA20D2787 TATA ACE ಟೆಂಪೋ ಅಂದಾಜು ಮೌಲ್ಯ 1,00,000/- ರೂಪಾಯಿ ಹಾಗೂ 40 ಬ್ಯಾಗ್ ಪಾಲಿತೀನ್ ಚೀಲದಲ್ಲಿರುವ ಮರಳು ಅಂದಾಜು ಮೌಲ್ಯ 4,000/- ರೂಪಾಯಿ ಮೌಲ್ಯದ ಮರಳನ್ನ ವಶಪಡಿಸಿಕೊಳ್ಳಲಾಗಿದೆ.
ಶಂಕರನಾರಾಯಣ : ದಿನಾಂಕ 09.08.2025 ರಂದು ಬೆಳಗ್ಗಿನ ಜಾವ 01;00 ಗಂಟೆಗೆ ಚರಣ ಹೆಗ್ಡೆ, ಮಹೇಶ ಹಾಲಾಡಿ ಮತ್ತು ಸುಧೀರ ಹೆಗ್ಡೆ ಎಂಬುವರು ಕುಳುಂಜೆ ಗ್ರಾಮದ ಬಾಕುಡೆ ಎಂಬಲ್ಲಿ ಶೇಡಿಮನೆ ಹೊಳೆಯಿಂದ ಮರಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡಲು 3 ಟಿಪ್ಪರ ಲಾರಿಗಳಲ್ಲಿ ಮರಳನ್ನು ತುಂಬಿಸಿ ನಿಲ್ಲಿಸಿರುವುದಾಗಿ ಬಂದ ಮಾಹಿತಿಯಂತೆ ಕುಳುಂಜೆ ಗ್ರಾಮದ ಬಾಕುಡೆ ಎಂಬಲ್ಲಿ ಹೋಗಿ ದಾಳಿ ನಡೆಸಿ KA21B3823ನೇ ನಂಬ್ರದ ಟಿಪ್ಪರ್ ಲಾರಿ, KA20AB1004 ನೇ ನಂಬ್ರದ ಟಿಪ್ಪರ್ ಲಾರಿ ಹಾಗೂ KA21A8357 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಹಾಗೂ 3 ಟಿಪ್ಪರ ಲಾರಿಯ ಬಾಡಿಯಲ್ಲಿ ತುಂಬಿಸಿದ ಸುಮಾರು 9 ಯುನಿಟ್ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದು ಅಂದಾಜು ಮೌಲ್ಯ ಸುಮಾರು 45,000/- ರೂಪಾಯಿ ಹಾಗೂ 3 ಟಿಪ್ಪರ ಲಾರಿಯ ಅಂದಾಜು ಮೌಲ್ಯ 18 ಲಕ್ಷ ರೂಪಾಯಿ ಆಗಬಹುದು, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2025 ಕಲಂ. 303(2), 3(5) BNS-2023 ಮತ್ತು ಕಲಂ 42, 43, 44 KARNATAKA MINOR MINERAL CONSISTENT RULE-1994 ಹಾಗೂ ಕಲಂ: 4(1-A), 21(4) MMRD Actರಂತೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಚರಣ್ ಹೆಗ್ಡೆ ಯನ್ನು ದಿನಾಂಕ 11/08/2025 ರಂದು ಠಾಣಾ ವ್ಯಾಪ್ತಿಯ ಬೆಳ್ವೆ ಗ್ರಾಮದ ತಾರೆಕಟ್ಟೆ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿರುತ್ತದೆ.



