ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಹಟ್ಟಿಯಂಗಡಿ ಜಂಕ್ಷನ್ ನ ಹೋಟೆಲೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಗಾಜಿನ ಬಾಟಲ್ ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಗಣೇಶ್ ಎಂಬವರಿಗೆ ಹಲ್ಲೆಯಾಗಿದೆ.
ಆರೋಪಿ ಪ್ರಸಾದ್ ರಬಡ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಗಣೇಶ (35), ಉತ್ತರ ಕನ್ನಡ ಜಿಲ್ಲೆ ಇವರು ದಿನಾಂಕ 08/07/2025 ರಂದು 19:45 ಗಂಟೆಗೆ ಹಟ್ಟಿಯಂಗಡಿ ಗ್ರಾಮದ ಹಟ್ಟಿಯಂಗಡಿ ಜಂಕ್ಷನ್ ಬಳಿ ಇರುವ ದುರ್ಗಾ ಹೋಟೇಲ್ ಗೆ ಊಟಕ್ಕೆ ಹೋಗಿ ಊಟ ಮಾಡುತ್ತಿರುವಾಗ ಅದೇ ಹೋಟೇಲ್ ನಲ್ಲಿ ಆಪಾದಿತ ಪ್ರಸಾದ @ ರಬಡ ಎಂಬುವವನು ಊಟ ಮಾಡುತ್ತಿದ್ದು ಆತನು ಊಟ ಮಾಡಿ ಎದ್ದು ಹೋಟೇಲ್ ಮಾಲೀಕನಿಗೆ ಬಿಲ್ಲು ಕೊಟ್ಟು ತನಗೆ ಸಿಗರೇಟು ಬೇಕು ಎಂದು ಹೇಳಿದ್ದು ಆ ಸಮಯ ಹೋಟೇಲ್ ಮಾಲೀಕ ಚಂದ್ರ ಸಿಗರೇಟು ಮಾರಾಟ ಮಾಡುತ್ತಿಲ್ಲ ಎಂದು ಹೇಳಿದ್ದು ಆಗ ಆಪಾದಿತನು ಚಂದ್ರ ರವರ ಜೊತೆಯಲ್ಲಿ ಸಿಗರೇಟು ತಂದು ಕೊಡುವಂತೆ ಗಲಾಟೆ ಮಾಡಲು ಪ್ರಾರಂಭಸಿದ್ದು ಆ ವೇಳೆ ಊಟ ಮಾಡುತ್ತಿದ್ದ ಪಿರ್ಯಾದಿದಾರರು ಆಪಾದಿತನನ್ನು ನೋಡಿರುತ್ತಾರೆ. ಆ ಸಮಯ ಆಪಾದಿತನು ಪಿರ್ಯಾದಿದಾರರಿಗೆ ನನ್ನನ್ನು ಏನು ಗುರಾಯಿಸಿ ನೋಡುತ್ತೀಯಾ ಎಂದು ಕೆಟ್ಟದಾಗಿ ಬೈದಿರುತ್ತಾನೆ, ಆಗ ಪಿರ್ಯಾದಿರಾರರು ಎದ್ದು ಕೈ ತೊಳೆಯಲು ಹೋಗಿದ್ದು ಆಗ ಆಪಾದಿತನು ಏಕಾಏಕಿ ಹೋಟೇಲ್ ನ ಟ್ರೇ ನಲ್ಲಿ ಇಟ್ಟಿದ ಗಾಜಿನ ಬಾಜಲ್ ಬಾಟಲ್ ತೆಗೆದುಕೊಂಡು ಪಿರ್ಯಾದಿರಾರರ ತಲೆಗೆ ಹೊಡೆದು ಕೊಲ್ಲುವ ಪ್ರಯತ್ನ ಮಾಡಿರುತ್ತಾನೆ.
ಹಲ್ಲೆಯಿಂದ ಪಿರ್ಯಾದಿದಾರರ ತಲೆಗೆ ಒಳ ನೋವು ಉಂಟಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2025 ಕಲಂ: 352, 351(2), 118(1), 109 BNS ರಂತೆ ಪ್ರಕರಣ ದಾಖಲಾಗಿರುತ್ತದೆ.