Home Crime ಹಾಡಿಯಲ್ಲಿ ‌ವ್ಯಕ್ತಿಯೋರ್ವರು‌ ನೇಣು ಬಿಗಿದುಕೊಂಡು‌ ಆತ್ಮಹತ್ಯೆ…!!

ಹಾಡಿಯಲ್ಲಿ ‌ವ್ಯಕ್ತಿಯೋರ್ವರು‌ ನೇಣು ಬಿಗಿದುಕೊಂಡು‌ ಆತ್ಮಹತ್ಯೆ…!!

ಶಂಕರನಾರಾಯಣ: ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ವ್ಯಕ್ತಿಯೋರ್ವರು ಕಾಯಿಲೆಯ ಸಮಸ್ಯೆಯಿಂದ ಹಾಡಿಯಲ್ಲಿ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದವರು ಸುಬ್ಬ ಕುಲಾಲ್ ಎಂದು ತಿಳಿದು ಬಂದಿದೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಫಿರ್ಯಾದಿ ಕರುಣಾಕರ (33) ಶಂಕರನಾರಾಯಣ ಗ್ರಾಮ, ಕುಂದಾಪುರ ತಾಲೂಕು ಇವರ ತಂದೆ ಸುಬ್ಬ ಕುಲಾಲ್ ಪ್ರಾಯ 64 ವರ್ಷ ರವರು ಕೃಷಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಕೈ ಕಾಲು ನಡುಗುವ ಸಮಸ್ಯೆ ಕಾಣಿಸಿಕೊಂಡಿದ್ದು,ಈ ಬಗ್ಗೆ ಸ್ಥಳಿಯ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಗುಣಮುಖರಾಗಿರುವುದಿಲ್ಲ, ಇತ್ತೀಚೆಗೆ ತನಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಕೊರಗುತ್ತಿದ್ದು, ದಿನಾಂಕ 18-10-2025 ರಂದು ಬೆಳಿಗ್ಗೆ 9:00 ಗಂಟೆಗೆ ಮನೆಯಲ್ಲಿ ಆಸ್ಪತ್ರೆಗೆ ಹೋಗುವುದಾಗಿ ಹೋದವರು ಸಂಜೆಯಾದರು ಬಾರದೇ ಇದ್ದು , ದಿನಾಂಕ 19-10-2025 ರಂದು ಬೆಳಿಗ್ಗೆ ಕೂಡಾ ಮನೆಗೆ ಬಾರದೇ ಇರುವುದರಿಂದ ಮನೆಯ ಸುತ್ತ-ಮುತ್ತ ಹುಡುಕಾಡಿದಲ್ಲಿ 7:00 ಗಂಟೆಯ ಸಮಯಕ್ಕೆ ಮನೆಯಿಂದ ಹಿಂದೆ ಹಾಡಿಯಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯು.ಡಿ.ಆರ್ 33/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.