Home Latest ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ತೆಂಕ ನಿಡಿಯೂರು ಗ್ರಾಮದ ಕುಮ್ಮೆಕೆರೆ ಕಾಮಗಾರಿ ಉದ್ಘಾಟನೆ

₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ತೆಂಕ ನಿಡಿಯೂರು ಗ್ರಾಮದ ಕುಮ್ಮೆಕೆರೆ ಕಾಮಗಾರಿ ಉದ್ಘಾಟನೆ

ಮಲ್ಪೆ : ತೆಂಕನಿಡಿಯೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಕುಮ್ಮೆಕೆರೆ ಕಾಮಗಾರಿಯನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.

ಕೆರೆ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ತೆಂಕನಿಡಿಯೂರು ಗ್ರಾಮದ ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಮ್ಮಕೆರೆಯನ್ನು ವಿಶೇಷ ಆದ್ಯತೆ ವಹಿಸಿ ಅಭಿವೃದ್ಧಿ ಪಡಿಸಲಾಗಿದ್ದು, ಕ್ಷೇತ್ರದ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಈ ಮೂಲಕ ಅಂತರ್ಜಲವನ್ನು ಪುನಶ್ಚೇತನಗೊಳಿಸಿ ಗ್ರಾಮದ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶರತ್ ಕುಮಾರ್ ಬೈಲಕೆರೆ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಾಯತ್ರಿ ಸುರೇಶ್, ಕೃಷ್ಣ ಶೆಟ್ಟಿ, ಪ್ರಶಾಂತ ಸಾಲ್ಯಾನ್, ಪಕ್ಷದ ಪ್ರಮುಖರಾದ ಉಮೇಶ್ ಪೂಜಾರಿ ಬಡಾನಿಡಿಯೂರು, ಪ್ರಭಾಕರ ತಿಂಗಳಾಯ, ನಾಗರಾಜ ಕುಂದರ್, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ನವೀನ್ ಕಾಂಚನ್, ತೆಂಕನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಜತ್ತನ್, ವಿನೋದ್ ಸುವರ್ಣ, ಸತೀಶ್ ಪೂಜಾರಿ, ಮಾಲಿನಿ ಜತ್ತನ್, ವಿಕಿತ ಸುರೇಶ್, ಪ್ರಶಾಂತ ಹೆಬ್ಬಾರ್, ಗೀತಾ ಶೆಟ್ಟಿ, ಸ್ಥಳೀಯರಾದ ಶಂಕರ್ ಬೈಲಕೆರೆ, ಸುರೇಶ್ ಸಾಲ್ಯಾನ್, ಅಪ್ಪಣ್ಣ ತೊಟ್ಟಂ, ಸುದೀಪ್ ತೊಟ್ಟಂ, ಗುರು ತೊಟ್ಟಂ, ಶಂಕರ್ ಬೈಲಕರೆ, ರವಿ ಬಂಗೇರ, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.