Home Crime ಎಸ್ಪಿ ಹರಿರಾಮ್ ಶಂಕರ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ : ಮಾಹಿತಿ, ಹಣ ಹಂಚಿಕೊಳ್ಳಬೇಡಿ :...

ಎಸ್ಪಿ ಹರಿರಾಮ್ ಶಂಕರ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ : ಮಾಹಿತಿ, ಹಣ ಹಂಚಿಕೊಳ್ಳಬೇಡಿ : ಎಸ್ಪಿ ಹರಿರಾಮ್ ಶಂಕರ್…!!

ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ.

ಹರಿರಾಂ ಶಂಕರ್ ಐಪಿಎಸ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿರುವುದು ಕಂಡು ಬಂದಿದೆ. SP ಉಡುಪಿ ಹೆಸರಿನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆ ಹೊರತುಪಡಿಸಿ ಯಾವುದೇ ವೈಯಕ್ತಿಕ ಅಥವಾ ಅಧಿಕೃತ ಖಾತೆಗಳು ಇರುವುದಿಲ್ಲ ಎಂದು ಎಸ್ ಪಿ ಅವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರು ಇಂತಹ ನಕಲಿ ಖಾತೆಗಳಿಗೆ ಪ್ರತಿಕ್ರಿಯಿಸದೆ ಯಾವುದೇ ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ಹಂಚಿಕೊಳ್ಳಬಾರದು. ಯಾವುದೇ ಸಂದೇಹಾಸ್ಪದ ಖಾತೆಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆ ಅಥವಾ ಫೇಸ್ಬುಕ್ .ಕಾಂ ಮೂಲಕ ರಿಪೋರ್ಟ್ ಮಾಡುವಂತೆ ತಿಳಿಸಿದ್ದಾರೆ.