ಉಡುಪಿ: ಟೀಮ್ ನೇಷನ್ ಫಸ್ಟ್ ಇದರ 9ನೇ ವರ್ಷದ ಚಿಣ್ಣರ ನಟ್ಟಿ ಕಾರ್ಯಕ್ರಮವು 19 ಜುಲೈ 2026 ರಂದು ಕಿದಿಯೂರಿನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸೂರಜ್ ಕಿದಿಯೂರ್ ಹಾಗೂ ಮುಖ್ಯ ಅತಿಥಿಗಳಾಗಿ ಮಂಜಪ್ಪDR ,ಸರ್ಕಲ್ ಇನ್ಸ್ಪೆಕ್ಟರ್ ಮಂಗಳೂರು, ರಾಘವೇಂದ್ರ, ಪೊಲೀಸ್ ಇನ್ಸ್ಪೆಕ್ಟರ್ – ಉಡುಪಿ ಮಹಿಳಾ ಠಾಣೆ, ಗಣೇಶ್ ಕುಮಾರ್ ಮಟ್ಟು, ವಕೀಲರು ಉಡುಪಿವಹಿಸಿದ್ದರು, ಹಾಗೂ ಅತಿಥಿಗಳಾಗಿ ಡಾ ಭಾಸ್ಕರ್ MN- ENT ಸರ್ಜನ್, ಡಾ UB ಶಬರಿ ಓರಲ್ ಸರ್ಜನ್, ಶ್ರೀ ಭಾಸ್ಕರ್ ಕೋಟಿಯಾನ್, ಶ್ರೀಮತಿ ವಿಮಲಾ ಇವರುಗಳು ಉಪಸ್ಥಿತರಿದ್ದರು . ಕಾರ್ಯಕ್ರಮದಲ್ಲಿ ಸ್ವರೂಪ ಸಾಧನ ವಿದ್ಯಾ ಸಂಸ್ಥೆ , ಪೆರ್ಣಾಜೆ ಪುತ್ತೂರು ಸುಳ್ಯದ ಸುಮಾರು 12೦ಮಕ್ಕಳು ಹಾಗೂ ಸ್ಥಳೀಯ ಮಕ್ಕಳು ಭಾಗವಹಿಸಿದ್ದರು. ಟೀಮ್ ನೇಷನ್ ಫಸ್ಟ್ ಸದಸ್ಯರು ಸ್ಥಳೀಯರೊಂದಿಗೆ ಭಾಗವಹಿಸಿ
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಾವಯವ ಕೃಷಿಯ ಮಹತ್ವದ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಡಾ ಅತುಲ್, ಉಪಾಧ್ಯಕ್ಷರು ಧನ್ಯವಾದ ಸಮರ್ಪಿಸಿದರು. ಪವನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಟೀಮ್ ನೇಶನ್ ಫಸ್ಟ್ ಇದರ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.







