Home Crime ಬೈಂದೂರು: ಮನೆಗೆ ನುಗ್ಗಿ 5.2 ಲಕ್ಷ ಮೌಲ್ಯದ ಚಿನ್ನ-ನಗದು ಕಳವು…!!

ಬೈಂದೂರು: ಮನೆಗೆ ನುಗ್ಗಿ 5.2 ಲಕ್ಷ ಮೌಲ್ಯದ ಚಿನ್ನ-ನಗದು ಕಳವು…!!

ಬೈಂದೂರು, ಮಾ.06: ಬೈಂದೂರು ತಾಲೂಕು ಪಡುವರಿ ಗ್ರಾಮದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ವರದಿಯಾಗಿದೆ.

ದಿನಾಂಕ 05-03-2026 ರಂದು ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 01:40 ಗಂಟೆಯ ನಡುವಿನ ಅವಧಿಯಲ್ಲಿ, ಪಡುವರಿ ಗ್ರಾಮದ ಪಟ್ವಾಲ್ ಹೌಸ್ ನಿವಾಸಿ ಗುರು ಕಿರಣ್‌ (42), ತಂದೆ ಪರಮೇಶ್ವರ ಪಟ್ವಾಲ್ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯ ಬಾಗಿಲನ್ನು ಮೀಟಿ ಒಳನುಗ್ಗಿದ್ದಾರೆ.

ಮನೆಯ ಒಳಗಿನ ಕೋಣೆಯಲ್ಲಿದ್ದ ಗೊಡ್ರೇಜ್ ಅಲ್ಮಾರಿಯಲ್ಲಿ ಇಟ್ಟಿದ್ದ ಸುಮಾರು 63 ಗ್ರಾಂ ತೂಕದ ಚಿನ್ನದ ಚೈನ್‌, ರಿಂಗ್‌, ಕಿವಿಯೋಲೆ, ಬ್ರಾಸ್ ಲೈಟ್ ಪೆಂಡೆಂಟ್ ಹಾಗೂ ನಗದು ರೂ.20,000 ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ರೂ.5,20,000 ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2026 ರಂತೆ BNS ಕಲಂ 331(3) ಮತ್ತು 305 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.