Home Latest ಖ್ಯಾತ ಚಿತ್ರ ನಟ ಹಾಗೂ ಹಾಸ್ಯ ನಟ ಶರಣ್ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ…!!

ಖ್ಯಾತ ಚಿತ್ರ ನಟ ಹಾಗೂ ಹಾಸ್ಯ ನಟ ಶರಣ್ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ…!!

ಉಡುಪಿ: ಕನ್ನಡದ ಖ್ಯಾತ ಚಿತ್ರ ಹಾಗೂ ಹಾಸ್ಯ ನಟ ಶರಣ್ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಪರ್ಯಾಯ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಬಳಿಕ ಮಠದ ಧಾರ್ಮಿಕ ಸಂಪ್ರದಾಯಗಳು ಹಾಗೂ ಆಧ್ಯಾತ್ಮಿಕ ವಾತಾವರಣವನ್ನು ಅವಲೋಕಿಸಿದ ಶರಣ್ ಅವರು ಸಂತಸ ವ್ಯಕ್ತಪಡಿಸಿದರು.

ನಟ ಶರಣ್ ಅವರ ಮಠ ಭೇಟಿ ವೇಳೆ ಭಕ್ತರು ಹಾಗೂ ಅಭಿಮಾನಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಭೇಟಿ ಮಠಕ್ಕೆ ಆಗಮಿಸಿದ್ದ ಭಕ್ತರ ಗಮನ ಸೆಳೆಯಿತು.