Home Karnataka News ಸಹಾಯಕ ಪ್ರಾಧ್ಯಾಪಕ ಶಿವಪ್ಪ ಎನ್ ರವರಿಗೆ ಪಿಎಚ್.ಡಿ ಪದವಿ ಘೋಷಣೆ : ಶಿವಪ್ಪ ಎನ್ ರವರಿಗೆ...

ಸಹಾಯಕ ಪ್ರಾಧ್ಯಾಪಕ ಶಿವಪ್ಪ ಎನ್ ರವರಿಗೆ ಪಿಎಚ್.ಡಿ ಪದವಿ ಘೋಷಣೆ : ಶಿವಪ್ಪ ಎನ್ ರವರಿಗೆ ಡಾಕ್ಟರೇಟ್ ಪದವಿ ಪೋಷಣೆ…!!

ಹಾವೇರಿ: ಜೂ.08: ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಶಿವಪ್ಪ ಎನ್. ಅವರು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರವಿಭಾಗದಲ್ಲಿ “ಎ ಸೋಶಿಯಲಾಜಿಕಲ್ ಸ್ಟಡಿ ಆಫ್ ಕೆ.ಸಿ. (ಕೋರಮಂಗಲ ಚಲ್ಲಘಟ್ಟ) ವ್ಯಾಲಿ ವಾಟರ್ ಪ್ರಾಜೆಕ್ಟ್ ಇನ್ ಕೋಲಾರ ಡಿಸ್ಟ್ರಿಕ್ಟ್” ಎಂಬ ವಿಷಯದ ಮೇಲೆ ಮಂಡಿಸಿದ್ದ ಸಂಶೋಧನಾ ಪ್ರಬಂಧವನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌.ಡಿ ಘೋಷಣೆ ಮಾಡಿದೆ. ಬೆಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟರಮಣಪ್ಪ ಮಾರ್ಗದರ್ಶನದಲ್ಲಿ ಶಿವಪ್ಪ ಎನ್. ಸಂಶೋಧನೆ ಕೈಗೊಂಡಿದ್ದರು. ಪ್ರಸ್ತುತ ಇವರು ಹಾನಗಲ್ ತಾಲೂಕು ಅಕ್ಕಿಆಲೂರ ಗ್ರಾಮದ ಸಿ.ಜಿ.ಬೆಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಶಿವಪ್ಪ ಎನ್ ಅವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಕಾಲೇಜಿನ ಸಿಬ್ಬಂದಿ ವರ್ಗದವರು, ಗುರು-ಹಿರಿಯರು, ಸ್ನೇಹಿತರು ಶುಭಕೋರಿ, ಅಭಿನಂದನೆ ಸಲ್ಲಿಸಿದ್ದಾರೆ.