Home Kundapura News ಸಿಮೆಂಟ್ ಕಟ್ಟೆ ಮೇಲೆ ಮಲಗಿದ್ದಲ್ಲೇ ಸಾವು…!!

ಸಿಮೆಂಟ್ ಕಟ್ಟೆ ಮೇಲೆ ಮಲಗಿದ್ದಲ್ಲೇ ಸಾವು…!!

ಕುಂದಾಪುರ: ಇಲ್ಲಿನ ವಡೇರಹೋಬಳಿ ನಿವಾಸಿ ರಾಧಾಕೃಷ್ಣ (65) ಮಂಗಳವಾರ ರಾತ್ರಿ ಕೋಟೇಶ್ವರ ಮೀನು ಮಾರುಕಟ್ಟೆ ಸಮೀಪದ ಸಿಮೆಂಟ್ ಕಟ್ಟೆ ಮೇಲೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.

ಅವರು ಸ್ವಲ್ಪ ದಿನ ಮನೆಯಲ್ಲಿ, ಇನ್ನೂ ಸ್ವಲ್ಪ ದಿನ ಹೊರಗಡೆ ಕಾಲ ಕಳೆಯುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಈ ಕಾರಣಕ್ಕೆ ಅಥವಾ ಇನ್ಯಾವುದೋ ಕಾರಣದಿಂದ ಅಸುನೀಗಿರಬಹುದೆಂದು ಪುತ್ರ ನಾಗರಾಜ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.