ಉಡುಪಿ : ನಗರದ ಮೂಡನಿಡಂಬೂರು ಮೈತ್ರಿ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೌರ ಕಾರ್ಮಿಕ ಬೀಡಿನ ಗುಡ್ಡೆ ಪೌರ ಕಾರ್ಮಿಕರ ಕಾಲನಿ ನಿವಾಸಿ ರಾಕೇಶ್ ಅವರು ತಮ್ಮ ಸ್ಕೂಟರ್ ಅನ್ನು ಮೈತ್ರಿ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿ ಕೆಲಸಕ್ಕೆಂದು ತೆರಳಿದ್ದರು.
ಕೆಲಸ ಮುಗಿಸಿ ಬಂದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ರಾಕೇಶ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



