ಕೊಲ್ಲೂರು : ಮಳೆ ನೀರು ಹರಿಯಲು ಪೈಪ್ ಲೈನ್ ಅಳವ ಡಿಸುವ ವಿಷಯದಲ್ಲಿ ಹೊಡೆದಾಟ ನಡೆದ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉದಯ ಆಚಾರ್ ಜತೆ ಉದಯಪ್ಪ ಎಂಬವರು ಆಕ್ಷೇಪ ಮಾಡಿ ಜಗಳವಾಡಿದರು.
ಉದಯಪ್ಪ ಅವರ ಪುತ್ರ ಪ್ರದೀಪ್, ಸ್ನೇಹಿತರಾದ ಸನತ್ ಬಳೆಗಾರ, ಪ್ರವೀಣ ಜೋಗಿ ಹಲ್ಲೆ ಮಾಡಿ, ಉದಯ ಆಚಾರ್ ಅವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಿರುತ್ತಾರೆ.
ಪ್ರತಿ ದೂರಿನಲ್ಲಿ ಉದಯ ಆಚಾರ್ ಹಾಗೂ ಮಂಜುಳಾ ಉದಯಪ್ಪ ಹಾಗೂ ಉಷಾ ಅವರಿಗೆ ಬೈದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.




