ತುರುವೇಕೆರೆ: ತಾಲ್ಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ 2025 ಭರದಿಂದ ಸಾಗಿದ್ದು, ಗಣತಿಯಿಂದ ಯಾರಾದರೂ ಹೊರಗುಳಿದಿದ್ದರೆ ತಕ್ಷಣ ಸರ್ಕಾರ ಆರಂಭಿಸಿರುವ ಸಹಾಯವಾಣಿಗೆ ಸಂಪರ್ಕಿಸಬೇಕೆಂದು ತಾಲೂಕಿನ ತಹಸೀಲ್ದಾರ್ ಕುಂ.ಇ.ಅಹಮದ್ ರವರು ತಾಲೂಕಿನ ನಾಗರೀಕರಿಗೆ ಮನವಿ ಮಾಡಿದ್ದಾರೆ.
13-08-2025 ರ ಆದೇಶದನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಮನೆ ಮನೆ ಸಮೀಕ್ಷೆಯಮ್ಮ ಸಪ್ಟೆಂಬರ್ -22 ರಿಂದ ಅಕ್ಟೋಬರ್ -7 ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುತ್ತದೆ . ಅದರಂತೆ ತುರುವೇಕೆರೆ ತಾಲೂಕಿನಲ್ಲಿಯೂ ಸಹಾ 443 ಸಮೀಕ್ಷೆದರಾರು, 22 ಸಮೀಕ್ಷಾ ಮೇಲ್ವಿಚಾರಕರು, 12 ಮಾಸ್ಟರ್ ಟ್ರೈನರ್ ಗಳು ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಆದರಿಂದ ತುರುವೇಕೆರೆ ತಾಲೂಕಿನಲ್ಲಿ ಯಾವುದೇ ಗ್ರಾಮ / ಹಟ್ಟಿ / ಕಾಲೋನಿ / ಬೀದಿಗಳಲ್ಲಿ ಕುಟುಂಬದಲ್ಲಿ ಸಮೀಕ್ಷೆ ನಡೆಯದೇ ಇದ್ದಲ್ಲಿ ಅಂತಹ ವಿವರಗಳನ್ನು ದಿ.07.10.2025 ರ ಒಳಗೆ ಕೆಳಕಂಡ ತುರುವೇಕೆರೆ ತಾಲ್ಲೂಕು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸಹಾಯವಾಣಿಯನ್ನು ಸಂಪರ್ಕಿಸಿ, ಮಾಹಿತಿ ಒದಗಿಸುವುದು ಅಥವಾ ತಾಲ್ಲೂಕು ಆಡಳಿತದ ಗಮನಕ್ಕೆ ತರುವುದು ಹಾಗೂ ಸಾರ್ವಜನಿಕರು ತಮ್ಮ ಸಮೀಕ್ಷೆಯನ್ನು ತಾವೇ ಮಾಡಲು ಇಚ್ಚಿಸಿದಲ್ಲಿ ಕೆಳಕಂಡ ಅಂತರ್ಜಾಲ ಕೊಂಡಿ ಬಳಸಿ ಸಮೀಕ್ಷೆಯಲ್ಲಿ ಸ್ವ – ಇಚ್ಛೆಯಿಂದ ಭಾಗವಹಿಸಿ, ವಿವರಗಳನ್ನು ಭರ್ತಿ ಮಾಡಿ , ಸಮೀಕ್ಷಾ ಐಡಿ / ಅಪ್ಲಿಕೇಷನ್ ಐಡಿಯನ್ನು ಅಂಟಿಸಿರುವ ಯು.ಹೆಚ್.ಐ.ಡಿ ಸ್ಟಿಕರ್ ಮೇಲೆ ನಮೂದಿಸಬೇಕಾಗಿ ಕೋರಲಾಗಿದೆ
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 08139-295838ಮತ್ತು 9902896988 ಸಂಖ್ಯೆಗೆ
ಸಂಪರ್ಕಿಸಲು ತಹಸೀಲ್ದಾರ್ ಕುಂ.ಞ.ಅಹಮದ್ ರವರು ಮನವಿ ಮಾಡಿದ್ದಾರೆ.