Home Crime ಸಂಚಾರ ನಿಯಮ ಉಲ್ಲಂಘಿಸಿ ಕರ್ಕಶ ಹಾರ್ನ್ ಬಳಕೆ : ಮಣಿಪಾಲ ಪೋಲೀಸರ ಕಾರ್ಯಾಚರಣೆ : 150ಕ್ಕೂ...

ಸಂಚಾರ ನಿಯಮ ಉಲ್ಲಂಘಿಸಿ ಕರ್ಕಶ ಹಾರ್ನ್ ಬಳಕೆ : ಮಣಿಪಾಲ ಪೋಲೀಸರ ಕಾರ್ಯಾಚರಣೆ : 150ಕ್ಕೂ ಅಧಿಕ ವಾಹನಗಳ ಮೇಲೆ ಪ್ರಕರಣ ದಾಖಲು…!!

ಉಡುಪಿ : ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 150ಕ್ಕೂ ಅಧಿಕ ವಾಹನಗಳ ಕರ್ಕಶ ವ್ಯಾಕ್ಯೂಮ ಹಾರ್ನ್ ಗಳು ಹಾಗೂ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಬಳಸಿ ಧ್ವಂಸಗೊಳಿಸಲಾಯಿತು.

ಸಂಚಾರ ನಿಯಮ ಉಲ್ಲಂಘಿಸಿ ಕರ್ಕಶ ಹಾರ್ನ್ ಬಳಕೆಯ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಸುಮಾರು 150ಕ್ಕೂ ಅಧಿಕ ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಯಮ ಪಾಲಿಸದ ವಾಹನಗಳ ಹಾರ್ನ್ ಗಳು ಹಾಗೂ ಸೈಲೆನ್ಸರ್ ಗಳನ್ನು ವಶಕ್ಕೆ ಪಡೆದಿದ್ದು, ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಅದನ್ನು ಧ್ವಂಸಗೊಳಿಸಲಾಯಿತು.

ಈ ವೇಳೆ ಮಣಿಪಾಲ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.