Home Karavali Karnataka ಚಂದ್ರಶೇಖರ್ ನಾಯ್ಕ ಸುಮಾರು 50 ಎಕರೆ ಮೇಲ್ಪಟ್ಟು ಹಡಿಲು ಬಿದ್ದ ಭೂಮಿಯನ್ನು ಕೃಷಿ ಮಾಡಿದರೆ ಮೂಲಕ...

ಚಂದ್ರಶೇಖರ್ ನಾಯ್ಕ ಸುಮಾರು 50 ಎಕರೆ ಮೇಲ್ಪಟ್ಟು ಹಡಿಲು ಬಿದ್ದ ಭೂಮಿಯನ್ನು ಕೃಷಿ ಮಾಡಿದರೆ ಮೂಲಕ ಮಾದರಿ ಕೃಷಿಕರಾಗಿದ್ದಾರೆ…!!

ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಕರಂಬಳ್ಳಿ ನಿವಾಸಿ ಶೀನ ನಾಯ್ಕ ಇಂದಿರಾ ಬಾಯಿ ಇವರ ಮಗ ಚಂದ್ರಶೇಖರ್ ನಾಯ್ಕ ಉಡುಪಿಯ ತೆಂಕ್ಕನಿಡಿಯೂರು,ಕರಂಬಳ್ಳಿ ಬೈಲು,ಪೆರಂಪಳ್ಳಿ ಬೈಲಿನಲ್ಲಿ ಸುಮಾರು 50 ಎಕರೆ ಮೇಲ್ಪಟ್ಟು ಇವರದೇ ಸ್ವಂತ ಟ್ಯಾಕ್ಟರ್ ಆಧುನಿಕ ನಾಟಿ ಯಂತ್ರ ಕಟಾವು ಯಂತ್ರ ಮೂಲಕ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ

ಒಂದು ಕಾಲಕ್ಕೆ ಉಡುಪಿಯಲ್ಲಿ ಕೃಷಿಯೇ ಜೀವನ ಪದ್ಧತಿಯಾಗಿತ್ತು. ಆದರೆ ಕಾಲಕ್ರಮೇಣ ಭತ್ತ ಬೆಳೆಯುವುದು ಬಿಟ್ಟು ಇಲ್ಲಿನ ಜನ ಇತರ ವಾಣಿಜ್ಯ ಚುಟವಟಿಕೆಗಳಲ್ಲೇ ಆಸಕ್ತರಾದರು. ಪರಿಣಾಮ ಜಿಲ್ಲೆಯಲ್ಲಿ ಹೆಕ್ಟೇರುಗಟ್ಟಲೆ ಭೂಮಿ ಕೃಷಿ ಮಾಡದೆ ಖಾಲಿ ಬಿದ್ದಿದೆ. ಆದರೆ ಮತ್ತೆ ಈ ಭಾಗದಲ್ಲಿ ಕೃಷಿ ಮಾಡಲು ಉತ್ಸಾಹ ತೋರಿದ್ದು, ಚಂದ್ರಶೇಖರ್ ನಾಯ್ಕ್ ಹೊಸತೊಂದು ಕೃಷಿ ಕ್ರಾಂತಿಗೆ ಸಾಕ್ಷಿಯಾಗಿದ್ದಾರೆ.ಕೃಷಿಭೂಮಿ ಹಡಿಲು ಬೀಳಬಾರದು ಎಂಬ ಅವರೇ ಸತಃ ಈ ಕಾರ್ಯಕ್ಕೆ ಮುಂದಾಗಿದ್ದು, ಖಾಲಿಬಿಟ್ಟ ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ಭತ್ತ ಮತ್ತು ಆಧುನಿಕ ರೀತಿಯಲ್ಲಿ ನಾಟಿ ಮಾಡಿ ಭೂಮಿಯನ್ನು ಮತ್ತೆ ಹಸಿರಾಗಿಸಿದ್ದಾರೆ ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸುರೇಂದ್ರ ನಾಯ್ಕ್ ಕರಂಬಳ್ಳಿ ಅವರು ಮಾತನಾಡಿ
ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಮಾರ್ಪಡಿಸುವುದರಿಂದ ಮುಂಬರುವ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ಹಿಂದೆ ಭತ್ತದ ಗದ್ದೆಗಳು ಗೇಣಿ ಪದ್ಧತಿಯಿಂದಾಗಿ ಪಾಳು ಬೀಳುತ್ತಿರಲಿಲ್ಲ. ಇಂದು ಕಷಿ ಜಮೀನು ಪ್ರಾಧಾನ್ಯತೆ ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ
ಚಂದ್ರಶೇಖರ್ ನಾಯ್ಕ ಅವರ ಕಾರ್ಯ ಮೆಚ್ಚುವಂಥದ್ದು ಎಂದರು

ಸುಧಾಕರ್ ಶೆಟ್ಟಿ ತೆಂಕ್ಕನಿಡಿಯೂರು ಚಂದ್ರಶೇಖರ್ ಅವರು ಹಲವಾರು ವರ್ಷಗಳಿಂದ ಹಡಿಲು ಬಿದ್ದ ಭೂಮಿಯನ್ನು ಕೃಷಿ ಮಾಡುತ್ತಾ ಬರುತ್ತಿದ್ದಾರೆ. ಒಂದಿಷ್ಟು ಕೃಷಿಕನನ್ನು ಸೇರಿಸಿಕೊಂಡು ಸಾಂಪ್ರದಾಯಿಕ ಮತ್ತು ಆಧುನಿಕ ರೀತಿಯಲ್ಲಿ ಕೃಷಿ ಮಾಡಿ ಉತ್ತಮ ಇಳುವರಿಯನ್ನು ಪಡೆದುಕೊಳ್ಳುತ್ತಾರೆ ಎಂದರು.

ಚಂದ್ರಶೇಖರ್ ನಾಯ್ಕ್ ಅವರು ಮಾತನಾಡಿ ನಮ್ಮ ತಂದೆ ಕಾಲದಿಂದ ಕೂಡ ಹಡಿಲು ಬಿದ್ದ ಭೂಮಿಯನ್ನು ಕೃಷಿ ಮಾಡುತ್ತಾ ಬಂದಿದ್ದೇನೆ, ಈಗಿನ ಪರಿಸ್ಥಿತಿಯಲ್ಲಿ ಭತ್ತದ ಕೃಷಿ ಚಟುವಟಿಕೆಯಲ್ಲಿ ಒಂದಷ್ಟು ಬದಲಾವಣೆಯಾಗಿದೆ. ಹಿಂದೆ ಮನೆಯಲ್ಲಿ ಹೆಚ್ಚಿನ ಜನ ಇರುತ್ತಿದ್ದರು ಅವರೇ ಗದ್ದೆಗಿಳಿದು ಕೆಲಸ ಮಾಡುತ್ತಿದ್ದರು. ಈಗ ಹಾಗಿಲ್ಲ, ಹೆಚ್ಚಿನ ಕುಟುಂಬಗಳಲ್ಲಿ ಮಕ್ಕಳೆಲ್ಲ ಹೊರಗೆ ಇದ್ದಾರೆ. ಜತೆಗೆ ಅವರಿಗೆ ಭತ್ತದ ಕೃಷಿಯ ಅನುಭವವೂ ಇಲ್ಲದಾಗಿದೆ. ಹೀಗಾಗಿ ಕಾರ್ಮಿಕರನ್ನು ಅವಲಂಭಿಸಬೇಕಾಗಿದೆ. ಕೂಲಿ ನೀಡಿ ಕೃಷಿ ಚಟುವಟಿಕೆ ನಡೆಸಿದರೆ ಅದರಿಂದ ನಷ್ಟವೇ ಆಗುತ್ತಿದೆ. ಈ ಹಿಂದೆ ಹಾಗಿರಲಿಲ್ಲ. ಸುತ್ತಮುತ್ತಲಿನವರು ಕೂಡು ಆಳುಗಳಾಗಿ ಕೆಲಸ ಮಾಡುತ್ತಿದ್ದರು. ಇದರಿಂದ ನಷ್ಟದ ಮಾತೇ ಇರಲಿಲ್ಲ. ಇದಲ್ಲದೆ, ಜನ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿದ್ದರು. ಗದ್ದೆ ಬಯಲಲ್ಲಿ ಹಾದು ಹೋಗುವ ವ್ಯಕ್ತಿಗಳು ಕೂಡ ಗದ್ದೆಗಿಳಿದು ನಾಟಿ ನೆಟ್ಟು ಹೋಗುತ್ತಿದ್ದರು. ಈಗಿನ ಪರಿಸ್ಥಿತಿ ಹಾಗಲ್ಲ ಕೃಷಿಗೆ ಜನ ಸಿಕ್ಕದ ಕಾರಣ ಬೇರೆ ಬೇರೆ ರಾಜ್ಯಗಳಿಂದ ಜನಗಳನ್ನು ಕರೆಸಿ ನಾಟಿ ಮಾಡುವ ಪರಿಸ್ಥಿತಿ ರೈತರಿಗೆ ಎದುರಾಗಿದೆ ಎಂದರು.

ಈ ಸಂದರ್ಭದಲ್ಲಿ ಹಲವಾರು ರೈತರು ಉಪಸ್ಥಿತರಿದ್ದರು.