Home Crime ಉಡುಪಿ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಇನೋವಾ ಕಾರ್ ಪಲ್ಟಿ : ಪ್ರಯಾಣಿಕರು ಅಪಾಯದಿಂದ...

ಉಡುಪಿ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಇನೋವಾ ಕಾರ್ ಪಲ್ಟಿ : ಪ್ರಯಾಣಿಕರು ಅಪಾಯದಿಂದ ಪಾರು…!!

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಮನೆಯ‌ ಆವರಣ ಗೋಡೆಗೆ ಗುದ್ದಿದ ಘಟನೆ ಕುಂಜಿಬೆಟ್ಟು ಹೋಂಡಾ ಶೋರೂಮ್‌ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಣಿಪಾಲದಿಂದ ಉಡುಪಿಗೆ ಕಡೆಗೆ ಬರುತ್ತಿದ್ದ ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.