ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಮರಳು ವಶಪಡಿಸಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಲೋಹಿತ್ ಕುಮಾರ್, ಸಿ ಎಸ್, ಪೊಲೀಸ್ ಉಪ ನಿರೀಕ್ಷಕರು, ಶಿರ್ವ ಪೊಲೀಸ್ ಠಾಣೆ ಇವರು ದಿನಾಂಕ:29.09.2025 ರಂದು ಬೆಳಿಗ್ಗೆ 11:30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಇಲಾಖಾ ವಾಹನದಲ್ಲಿ ರೌಂಡ್ಸು ಕರ್ತವ್ಯದಲ್ಲಿರುವಾಗ ಪೊಲೀಸ್ ಬಾತ್ಮೀದಾರರು ವಿಚಾರ ತಿಳಿಸಿ ಕಳತ್ತೂರು ಗ್ರಾಮದ ಪೈಯ್ಯಾರು ಎಂಬಲ್ಲಿರುವ ಸರಕಾರಿ ಹೊಳೆಯಿಂದ ದಿನಾಂಕ:27.09.2025 ರಿಂದ ಈ ದಿನದವರೆಗೂ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂದು ತಿಳಿಸಿದಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಸ್ಥಳದಲ್ಲಿ ಹೊಳೆಯಿಂದ ಸುಮಾರು 20 ಬುಟ್ಟಿ ಮರಳನ್ನು ತೆಗೆದು ದಡದಲ್ಲಿ ಶೇಖರಿಸಿ ಇಟ್ಟಿರುವುದು ಕಂಡು ಬರುತ್ತದೆ. ಸ್ಥಳದಲ್ಲಿ ಯಾವುದೇ ವಾಹನಗಳು ಮತ್ತು ವ್ಯಕ್ತಿಗಳು ಇರುವುದು ಕಂಡು ಬಂದಿರುವುದಿಲ್ಲ. ಬೇರೆ ಯಾವುದೇ ಪರಿಕರಗಳು ಕಂಡು ಬಂದಿರುವುದಿಲ್ಲ. ಹೊಳೆಗೆ ಬರುವ ದಾರಿ ಮದ್ಯೆ ಯೋಗೀಶ ಆಚಾರ್ಯ ಎಂಬವರ ಮನೆಗೆ ಸಿಸಿ ಕ್ಯಾಮೇರ ಅಳವಡಿಸಿದ್ದು ಸಿಸಿ ಕ್ಯಾಮೇರವನ್ನು ಪರಿಶೀಲಿಸಲಾಗಿ ದಿನಾಂಕ:27.09.2025 ರಂದು KA25AA7144 ನೇ ನೊಂದಣಿ ಸಂಖ್ಯೆಯ ವಾಹನದಲ್ಲಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಕುತ್ಯಾರು ಗ್ರಾಮ ಪಂಚಾಯತ್ ಅಬಿವೃದ್ದಿ ಅಧಿಕಾರಿಯವರನ್ನು ವಿಚಾರಿಸಿದಾಗ ದಿನಾಂಕ:27.09.2025 ರಂದು ಮರಳು ಸಾಗಾಟ ಮಾಡಲು ಪಂಚಾಯತ್ ಕಚೇರಿಯಿಂದ ಯಾವುದೇ ಪರವಾನಿಗೆ ನೀಡಿರುವುದಿಲ್ಲ ಎಂದು ತಿಳಿಸಿರುತ್ತಾರೆ. KA25AA7144 ನೇ ನೊಂದಣಿ ಸಂಖ್ಯೆಯ ವಾಹನದ ಮಾಲಕ ಮತ್ತು ಚಾಲಕರು ಯಾವುದೇ ಪರವಾನಿಗೆ ಇಲ್ಲದೇ ಸರಕಾರಿ ಸ್ಥಳದಲ್ಲಿದ್ದ ಮರಳನ್ನು ಕಳ್ಳತನ ಮಾಡಿ ಅಕ್ರಮವಾಗಿ ವಾಹನದಲ್ಲಿ ಸಾಗಾಟ ಮಾಡಿದ್ದು.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2025,US 303(2) BNS 2023. ಕಲಂ: 4, 4A, 21 MMDR ACT ರಂತೆ ಪ್ರಕರಣ ದಾಖಲಾಗಿರುತ್ತದೆ.