Home Karavali Karnataka ಬೈಂದೂರು: ಒಳಮೀಸಲಾತಿ ಸಮೀಕ್ಷೆಯ ಬಗ್ಗೆ ಸಚಿವರ ಜೊತೆ ಚರ್ಚೆ…!!

ಬೈಂದೂರು: ಒಳಮೀಸಲಾತಿ ಸಮೀಕ್ಷೆಯ ಬಗ್ಗೆ ಸಚಿವರ ಜೊತೆ ಚರ್ಚೆ…!!

ಬೈಂದೂರು: ಒಳಮೀಸಲಾತಿ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಉಡುಪಿ ಭಾಗದಲ್ಲಿ ಒಳ ಮೀಸಲಾತಿ ಸಮೀಕ್ಷೆಯ ವಿಚಾರದಲ್ಲಿ ಆದಿ ದ್ರಾವಿಡ ಸಮುದಾಯದವರಿಗೆ ಸಮೀಕ್ಷೆಯ ಉಪಜಾತಿ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದರಿಂದ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಸಮುದಾಯದ ಪರವಾಗಿ ಅಂಬೇಡ್ಕರ್ ಸೇನೆ ರಿ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ಜಗದೀಶ್ ಗಂಗೊಳ್ಳಿ ಇವರು ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ .ಹೆಚ್ . ಸಿ . ಮಹಾದೇವಪ್ಪ ರವರ ಜೊತೆ ಪರಿಶಿಷ್ಟ ಜಾತಿ ಸಮುದಾಯದವರ ಉಳಿವಿಗಾಗಿ ಒಳ ಮೀಸಲಾತಿ ಸಮೀಕ್ಷೆಯ ಬಗ್ಗೆ ಸಮಗ್ರ ಮಾಹಿತಿಯ ಬಗ್ಗೆ ಚರ್ಚೆ ಮಾಡಿದರು,

ಮತ್ತೆ ಸಂಜೆಯ ವೇಳೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರ ಮನೆಯಲ್ಲಿ ಅದಿದ್ರಾವಿಡ ಸಮುದಾಯದ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದರು ನಂತರ ಸಚಿವರು ಆಯೋಗದ ಅಧ್ಯಕ್ಷರ ಗಮನಕ್ಕೂ ತಂದರು ಹಾಗೂ ಸಮುದಾಯದ ಹಿರಿಯ ಅಧಿಕಾರಿಗಳ ಜೊತೆಯೂ ನಿನ್ನೆ ಇಡೀ ದಿನ ಸರ್ಕಾರದ ಅಧಿಕಾರಿಗಳ ಜೊತೆಗೆ ಸಮುದಾಯದ ಬಗ್ಗೆ ಚರ್ಚೆ ಮಾಡಿ ಒಂದಷ್ಟು ಮಾಹಿತಿ ಪಡೆದರು

ಈ ವೇಳೆ ಹಿರಿಯ ಐಎಎಸ್ ಅಧಿಕಾರಿ ಸಿದ್ದಯ್ಯ ಪತ್ರಕರ್ತರಾದ ದಾಮೋದರ ನಾಯಕವಾಡಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


ಸಚಿವರ ಜೊತೆ ಸಮುದಾಯದ ಕಾಳಜಿ ವಹಿಸಿ ಒಂದಷ್ಟು ಮಾಹಿತಿ ಬಗ್ಗೆ ಚರ್ಚೆ ಮಾಡಲಾಯಿತು.