ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಸಂಬಂಧ ಎರಡನೇ ದಿನವಾದ ಇಂದೂ ಕೂಡಾ ಕಾರ್ಯಾಚರಣೆ ಮುಂದುವರೆದಿದೆ.
ನಿನ್ನೆಯ ಮಾದರಿಯಲ್ಲೇ ಮೊದಲು ಮಾರ್ಕಿಂಗ್ 2 ಸ್ಥಳದಲ್ಲಿ ಉತ್ಖನನ ನಡೆಸಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ಮತ್ತೊಂದು ಮಾರ್ಕಿಂಗ್ ಸ್ಥಳ ಉತ್ಪನನ ಪ್ರಾರಂಭವಾಗಲಿದೆ ಎಂದು ಎಸ್ ಐಟಿ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಮಾರ್ಕಿಂಗ್ ಸ್ಪಾಟ್ – 2 ಗೆ ಹೋದ ಟೀಂ ಇನ್ನು ಕೆಲವೇ ಕ್ಷಣಗಳಲ್ಲಿ ಉತ್ಖನನ ಪ್ರಾರಂಭಿಸಿಲಿದ್ದಾರೆ. ಈ ಎಲ್ಲ ಪ್ರಕ್ರಿಯೆಯ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದ್ದು, ಎಸಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಸಾಕ್ಷಿ ದೂರುದಾರನ ಜೊತೆಯಲ್ಲಿ ಬಂದಿದ್ದ ವಕೀಲರನ್ನು ಹೊರ ಬಿಟ್ಟು ಎಸ್‌ಐಟಿ ಟೀಂ ಅರಣ್ಯ ಜಾಗಕ್ಕೆ ತೆರಳಿದೆ.

