ಉಡುಪಿ ನಗರದ ಕಲ್ಸಂಕ ಪ್ರದೇಶದಲ್ಲಿ ಪುಟ್ಟ ಮಗುವಿನೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ದೊರೆತ ತಕ್ಷಣ ಉಡುಪಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಮಗುವಿನ ಸುರಕ್ಷತೆ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಕುಟುಂಬವನ್ನು ಮಂಗಳೂರಿನ ವಾಮಂಜೂರಿನ ಸರ್ಕಾರಿ ಆಶ್ರಯ ಗೃಹಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಸಾರ್ವಜನಿಕರು ನೀಡುವ ಸಮಯೋಚಿತ ಮಾಹಿತಿಯು ಮಾನವೀಯ ಸೇವೆ ಮತ್ತು ಮಕ್ಕಳ ರಕ್ಷಣೆಗೆ ಮಹತ್ತರ ನೆರವಾಗುತ್ತದೆ.




