ಮೂಡುಬೆಳ್ಳೆ : ಬಂಟರ ಸಂಘ ಪಳ್ಳಿ – ನಿಂಜೂರು ವಲಯ (ರಿ) ಇದರ ಕಛೇರಿ ಉದ್ಘಾಟನಾ ಕಾರ್ಯಕ್ರಮ ದಿನಾಂಕ 28/09/2025 ಭಾನುವಾರ ಬೆಳಿಗ್ಗೆ ಗಣ ಹೋಮ ಮಾಡುವುದರ ಮೂಲಕ ನಡೆಯಿತು. ಸಂಘದ ನಿಕಟಪೂರ್ವ ಅಧ್ಯಕ್ಷ ಪಳ್ಳಿ ವಿಜಯ ಎಂ ಶೆಟ್ಟಿ ಕಟ್ಟಡದಲ್ಲಿ, ಕಚೇರಿ ಉದ್ಘಾಟನೆಯನ್ನು ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ ಪಳ್ಳಿ ರಿಬ್ಬನ್ ಕಟ್ ಮಾಡುವುದರ ಮೂಲಕ ಸಾಂಕೇತಿಕವಾಗಿ ನೆರವೇರಿಸಿದರು.
ವಲಯದ ಬಂಟ ಸಮಾಜ ಬಾಂದವರೆಲ್ಲರೂ ಸಾಕ್ಷಿಯಾದರು. ನಂತರ ಮಹಿಳಾ ಘಟಕ ಕಾರ್ಯದರ್ಶಿ ಸೌಮ್ಯ ಪ್ರಶಾಂತ್ ಶೆಟ್ಟಿ ಪ್ರಾರ್ಥನೆ ಮಾಡುವುದರ ಮೂಲಕ ಸಭಾ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಸ್ಥಾಪಕ ಅಧ್ಯಕ್ಷ ಮನೋಹರ ಶೆಟ್ಟಿ ಪಳ್ಳಿ ಪ್ರಾಸ್ತವಿಕ ಭಾಷಣ ಮಾಡಿದರು. ನಿಕಟ ಪೂರ್ವ ಅಧ್ಯಕ್ಷ ವಿಜಯ ಎಂ ಶೆಟ್ಟಿ ಪಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಕಾಂತಿ ದಿನೇಶ್ ಶೆಟ್ಟಿ ಪಳ್ಳಿ, ನೂತನ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳಿ ಸಂದರ್ಬೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನಿಂಜೂರು, ಮಹಿಳಾ ಘಟಕ ಸ್ಥಾಪಕ ಅಧ್ಯಕ್ಷೆ ಸುಫಲ ವಿಜಯ ಎಂ ಶೆಟ್ಟಿ, ಕಾರ್ಯದರ್ಶಿ ಗೌರೀಶ್ ಶೆಟ್ಟಿ ನಿಂಜೂರು, ಕೋಶಾಧಿಕಾರಿ ಸುನಿಲ್ ಶೆಟ್ಟಿ ಪಳ್ಳಿ ಉಪಸ್ಥಿತರಿದ್ದರು.ಚಿತ್ರ ವಿನಯ ಶೆಟ್ಟಿ ಸ್ವಾಗತಿಸಿದರು, ಮಾಜಿ ಕಾರ್ಯದರ್ಶಿ ಶೇಖರ ಶೆಟ್ಟಿ ಪಳ್ಳಿ ಧನ್ಯವಾದವಿತ್ತರು. ಚಿತ್ರ ವಿನಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ದಿನಕರ ಶೆಟ್ಟಿ, ಪ್ರಶಾಂತ್ ಶೆಟ್ಟಿ ಪಳ್ಳಿ ಮತ್ತು ಜತೆ ಕಾರ್ಯದರ್ಶಿ ಕಾಂತೇಶ್ ಶೆಟ್ಟಿ ಸಹಕರಿಸಿದರು.