ಕಾರ್ಕಳ : ಮದ್ಯವೆಂದು ವಿಷ ಪದಾರ್ಥ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನಪ್ಪಿದ ಘಟನೆ ಮುದ್ರಾಡಿಯ ಬಲ್ಲಾಡಿಯಲ್ಲಿ ನಡೆದಿದೆ.
ಹೆಬ್ರಿ ಗ್ರಾಮದ ತಮ್ಮು ಪೂಜಾರಿ (78) ಮೃತ ದುರ್ದೈವಿ ಎಂದು ತಿಳಿಯಲಾಗಿದೆ.
ತಮ್ಮು ಪೂಜಾರಿ ಅವರಿಗೆ ಮದ್ಯಪಾನದ ಅಭ್ಯಾಸವಿದ್ದು, ಮಧ್ಯಾಹ್ನ ಮನೆಯಲ್ಲಿದ್ದ ವಾಹನದ ಬ್ರೇಕ್ ಪ್ಯೂಡ್ ಆಯಿಲ್ (ವಿಷ ಪದಾರ್ಥ)ನ್ನು ಮದ್ಯಪಾನವೆಂದು ಬಾವಿಸಿ ಸೇವಿಸಿದ್ದರು.
ಅಸ್ವಸ್ಥಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಡಿ. 2ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



