Home Crime ಬೈಕ್ ಹಾಗೂ ಕೋಳಿ ಸಾಗಾಟದ ವಾಹನದ ನಡುವೆ ಅಪಘಾತ : ಬೆಳ್ಳಾರೆ ನಿವಾಸಿ ಸೂರಜ್ ರೈ...

ಬೈಕ್ ಹಾಗೂ ಕೋಳಿ ಸಾಗಾಟದ ವಾಹನದ ನಡುವೆ ಅಪಘಾತ : ಬೆಳ್ಳಾರೆ ನಿವಾಸಿ ಸೂರಜ್ ರೈ ಮೃತ್ಯು…!!

ಬೆಳ್ಳಾರೆ : ಕೆಲ ದಿನಗಳ ಹಿಂದೆ ಕುಣಿಗಲ್ ನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೆಳ್ಳಾರೆ ನಿವಾಸಿ ಯಕ್ಷಗಾನ ಕಲಾವಿದ ವಾಸುದೇವ ರೈ ಅವರ ಪುತ್ರ ಸೂರಜ್ ರೈ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ 21ರಂದು ರಾತ್ರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸೂರಜ್ ರೈ ಅವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ಬಂದ ಕೋಳಿ ಸಾಗಾಟದ ಲಾರಿ ಡಿಕ್ಕಿ ಹೊಡೆದಿದೆ.

ಪರಿಣಾಮ ಗಂಭೀರ ಗಾಯಗೊಂಡಿದ್ದ ಸೂರಜ್ ರೈ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸೂರಜ್ ರೈ ಅವರ ಇತ್ತೀಚೆಗಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.