ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಕಲ್ಮಾಡಿ ಬಿಲ್ಲುಗುಡ್ಡೆ ರೇವತಿ ದಿಲೀಪ್ ಇವರಿಗೆ ಸೇರಿದ ದನವು ಅವಘಡಕೊಳಗಾಗಿ ಚಿಕಿತ್ಸೆ ಫಲಿಸದೇ ನೆನ್ನೆ ಮೃತಪಟ್ಟಿತು.
ಗೋಮಾತೆಗೆ ಗೌರವಪೂರ್ಣವಾಗಿ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಉಡುಪಿ ನಗರ ಸಭಾ ಸದಸ್ಯ ಮತ್ತು ಸ್ಥಾಯಿ ಸಮಿತಿಯ ಅಧಕ್ಷರೂ ಆದ ಸುಂದರ್ ಜೆ ಕಲ್ಮಾಡಿ ಇವರ ಮುತುವರ್ಜಿಯಲ್ಲಿ ಸ್ಥಳೀಯರಾದ ಅರುಣ್, ಗಿರೀಶ್, ವಿನೋದರ್, ಮನೋಜ್, ನವೀನ್, ಗೋವರ್ಧನ್, ಇಂದಿರಾ ಕಲ್ಮಾಡಿ, ಸದಾನಂದ್ ಬಿಲ್ಲುಗುಡ್ಡೆ ಮತ್ತಿತ್ತರು ಸೇರಿಕೊಂಡು ಕ್ರೇನ್ ಮೂಲಕ ವಿಧಿವತ್ತಾಗಿ ಗದ್ದೆಯಲ್ಲಿ ಊಳಲಾಯಿತ್ತು. ಯಾವುದೇ ಫಲಪೇಕ್ಷೆಯಿಲ್ಲದ ಇವರ ಸಮಾಜಮುಖಿ ಪ್ರವೃತ್ತಿ ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟಿತು.
