ಉಡುಪಿ : ಜಿಲ್ಲೆಯ ಆಯ್ದ 71 ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ಉತ್ತಮ ಆರೋಗ್ಯವನ್ನು ಹೊಂದಲು ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಲು 30 ದಿನಗಳ ಉಚಿತ “ನವಚೇತನ ಶಿಬಿರ” ವನ್ನು ಆತ್ರಾಡಿಯಲ್ಲಿರುವ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ “ಸೌಖ್ಯವನ” ಪರೀಕದಲ್ಲಿ ಏರ್ಪಡಿಸಲಾಗಿದ್ದು, ದಿನಾಂಕ 01.07.25 ರಂದು ಪ್ರಾರಂಭಗೊಂಡಿರುತ್ತದೆ.
ಈ 30 ದಿನಗಳ ತರಬೇತಿಯಲ್ಲಿ ಪ್ರತಿದಿನ ಬೆಳಿಗ್ಗೆ ಸೌಖ್ಯವನ ಪರೀಕ ಇದರ ಯೋಗ ತರಬೇತುದಾರದಿಂದ ಒಂದು ಗಂಟೆ ಡೈನಮಿಕ್ ಯೋಗ ತರಬೇತಿಯನ್ನು ನೀಡಲಾಗುತ್ತಿದೆ. ನಂತರ ಒಂದು ಗಂಟೆಯ ತರಬೇತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ ಶಿಕ್ಷಕರಿಂದ ಭೌತಿಕ ವ್ಯಾಯಾಮವನ್ನು ನೀಡಲಾಗುತ್ತಿದೆ.
ಯುವ ಸಬಲೀಕರಣ ಇಲಾಖೆ ಇಂದ ಫಿಟ್ನೆಸ್ ತರಬೇತಿ, ಸ್ವಾಯ್ ಡಾನ್ಸ್ ಅಕಾಡೆಮಿಯವರಿಂದ Zumba ತರಗತಿ, ವಿವಿಧ ಕ್ಷೇತ್ರದ ಪರಿಣಿತರಿಂದ ಆರೋಗ್ಯದ ಬಗ್ಗೆ ಉಪನ್ಯಾಸ ಹಾಗೂ ಪ್ರತಿದಿನ ಸಂಜೆ ಒಂದು ಗಂಟೆ ನೇಚರ್ ವಾಕ್ ನೀಡಲಾಗಿರುತ್ತದೆ. ಇವರಲ್ಲಿ ಅವಶ್ಯಕತೆ ಇದ್ದವರಿಗೆ ಫಿಶಿಯೋಥೆರಪಿ ಹಾಗೂ ಸ್ಟೀಮ್ ಬಾತ್ ಮಾಡಿಸಲಾಗಿರುತ್ತದೆ.ಈ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರತಿದಿನ ಪತ್ಯದ ಆಹಾರ (Diet Food) ಮಾತ್ರ ನೀಡಲಾಗಿರುತ್ತದೆ.
ಈ ಶಿಬಿರ ಬಹಳ ಯಶಸ್ವಿಯಾಗಿ 30 ದಿನಗಳನ್ನು ಪೂರೈಸಿ, ಇದರ ಸಮಾರೋಪ ಸಮಾರಂಭವನ್ನು ಅಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂ, ಉಡುಪಿ ಇಲ್ಲಿ ದಿನಾಂಕ 30.07.2025 ರಂದು ಸಂಜಿ 4:00 ಗಂಟೆಗೆ ನಡೆದಿರುತ್ತದೆ ಈ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟರಾದ ಪ್ರಮೋದ್ ಶೆಟ್ಟಿ ಹಾಗೂ ಉಡುಪಿಯ ಅಂತರಾಷ್ಟ್ರೀಯ ಕ್ರೀಡಪಟು ಅಭಿನ್ ದೇವಾಡಿಗ, ಅಧ್ಯಕ್ಷತೆಯನ್ನು ಹರಿರಾಮ್ ಶಂಕರ್ ಐಪಿಎಸ್ ಉಡುಪಿ ಪೊಲೀಸ್ ಜಿಲ್ಲೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ನಾಯಕ್, ಶಾಂತಿವನ ಟ್ರಸ್ಟ್ ನ ಸೀತಾರಾಮ್ ತೋಳ್ ಪಡಿತಾಯ, ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಗೋಪಾಲ ಪೂಜಾರಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ ಎಲ್ಲರನ್ನು ಗೌರವಿಸಲಾಯಿತು.
ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಒಟ್ಟು 500 ಕೆ ಜಿ ತೂಕ ಕಳೆದುಕೊಂಡಿದ್ದು, ಪ್ರತಿಯೊಬ್ಬರು ತಲಾ 7 ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಂಡಿರುತ್ತಾರೆ. ಎಲ್ಲಾ ಶಿಬಿರಾರ್ತಿಗಳು ತಮ್ಮ BMI ಕಡಿಮೆ ಮಾಡಿಕೊಂಡಿರುತ್ತಾರೆ ಹಾಗೂ ಬಿಪಿ ಮತ್ತು ಶುಗರ್ ಗಳನ್ನು ಕೂಡ ಕಡಿಮೆ ಮಾಡಿಕೊಂಡಿರುತ್ತಾರೆ.











