Home Crime ಪಡುಬಿದ್ರಿ : ವ್ಯಕ್ತಿಯೋರ್ವರು ಮನೆಗೆ ಬಾರದೇ ನಾಪತ್ತೆ…!!

ಪಡುಬಿದ್ರಿ : ವ್ಯಕ್ತಿಯೋರ್ವರು ಮನೆಗೆ ಬಾರದೇ ನಾಪತ್ತೆ…!!

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ‌ಸಮೀಪ ಗದ್ದೆಗೆ ಹೋದ ವ್ಯಕ್ತಿಯೋರ್ವರು ಮನೆಗೆ‌ ‌ಬಾರದೇ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದವರು ಸದಾಶಿವ ಎಂದು ತಿಳಿಯಲಾಗಿದೆ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ‌ನಡೆಸುತ್ತಿದ್ದಾರೆ.

ಪ್ರಕರಣ ವಿವರ : ಪಿರ್ಯಾದಿದಾರರಾದ ಹರೀಶ್‌ (39), ಎಲ್ಲೂರು ಗ್ರಾಮ ಕಾಪು ಇವರು ಕೆಲಸದ ನಿಮತ್ತಾ ಪಣಿಯಾರಿನಲ್ಲಿರುವಾಗ ಪಿರ್ಯಾದಿದಾರರ ತಾಯಿ ದೂರವಾಣಿ ಕರೆಮಾಡಿ ನಿಮ್ಮ ತಂದೆ ಸದಾಶಿವ (76) ರವರು ದಿನಾಂಕ 04/09/2025 ರಂದು 11:00 ಗಂಟೆಗೆ ಎಂದಿನಂತೆ ಉಪಹಾರ ಮಾಡಿ ಗದ್ದೆ ಬದಿ ಕಡೆಗೆ ಹೋಗಿದ್ದು 2:30 ಗಂಟೆಯಾದರು ಮನೆಗೆ ಬಾರದೇ ಇದ್ದ ಬಗ್ಗೆ ತಿಳಿಸಿದ್ದು ಪಿರ್ಯಾದಿದಾರರು ಕೂಡಲೆ ಮನೆಗೆ ಬಂದು ಗದ್ದೆ ಬದಿಗಳಲ್ಲಿ ಹುಡುಕಾಡಿ ಹಾಗೂ ಸ್ನೇಹಿತರು ಮತ್ತು ಸಂಬಂದಿಕರಲ್ಲಿ ವಿಚಾರಿಸಿದಲ್ಲಿ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಸದಾಶಿವ ಶೆಟ್ಟಿ ರವರು ಮನೆಯಿಂದ ಹೋದವರು ಮನೆಗೂ ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2025, ಕಲಂ:ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.